ಬಿಳಿ ಮುಟ್ಟು ಆಗುವ ಲಕ್ಷಣಗಳು | ನಿಮ್ಮ ಮಗುವಿಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ

ಬಿಳಿ ಮುಟ್ಟು ಆಗುವ ಲಕ್ಷಣಗಳು: ಸಾಮಾನ್ಯವಾಗಿ ಎಲ್ಲ ಹೆಣ್ಣು ಮಕ್ಕಳನ್ನು ಮುಟ್ಟಿನ ಸಮಸ್ಯೆ ಕಂಡು ಬರುತ್ತೆ ಹಾಗಾಗಿ ನೀವು ಚಿಂತಿಸುವ ಅವಶ್ಯಕತೆ ಇಲ್ಲ, ಇತ್ತೀಚಿನ ದಿನದಲ್ಲಿ ಎಲ್ಲಾ ಮಹಿಳೆಯರು ಮನೆಯ ನಿರ್ವಹಣೆ ಜೊತೆಗೆ ಕೆಲಸಕ್ಕೆ ಸಹ ಅಪಾರ ಪ್ರಮಾಣದ ಕೆಲಸದ ಒತ್ತಡದಿಂದ ಸರಿಯಾದ ಸಮಯಕ್ಕೆ ಊಟ ಹಾಗೂ ನಿದ್ರೆಯನ್ನು ಮಾಡುತ್ತಿಲ್ಲ ಈ ಕಾರಣಕ್ಕಾಗಿಯೇ ದೇಹದಲ್ಲಿ ಹಾರ್ಮೋನುಗಳ ವ್ಯತ್ಯಾಸದಿಂದ ಮಹಿಳೆಯರಲ್ಲಿ ಸಾಮಾನ್ಯವಾಗಿ ಮುಟ್ಟಿನ ಸಮಸ್ಯೆ ಇತ್ತೀಚಿನ ದಿನದಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಈ ಸಮಸ್ಯೆಯಿಂದ ನೀವು ಹೊರ ಬರಬೇಕಾದರೆ ಇರುವ ಒಂದೇ ಮಾರ್ಗ ಸರಿಯಾದ ಸಮಯದಲ್ಲಿ ಊಟವನ್ನು ಮಾಡಬೇಕು ಕನಿಷ್ಠ ಏಳು ಗಂಟೆ ನಿದ್ರೆಯನ್ನು ಮಾಡಬೇಕು, ಇವೆಲ್ಲ ಮಾಡುವುದರ ಜೊತೆಗೆ ಒತ್ತಡದ ಕೆಲಸ ನೀವು ನಿರ್ವಹಿಸುತ್ತಿದ್ದೀರಾ ಹಾಗಾಗಿ ಬೆಳಗ್ಗೆ ಅಥವಾ ರಾತ್ರಿ ವೇಳೆ ಧ್ಯಾನ ಮಾಡಿ ಇದರಿಂದ ನಿಮಗೆ ತುಂಬಾ ಅನುಕೂಲಗಳು ಆಗಲಿವೆ. ಮೊದಲಿಗೆ ಮನಸ್ಸಿನ ಒತ್ತಡವನ್ನ ಕಡಿಮೆ ಮಾಡಿಕೊಳ್ಳಲು ಧ್ಯಾನ ತುಂಬಾ ಸಹಕಾರಿಯಾಗಿದೆ, ಎಷ್ಟೇ ಕೆಲಸದ ಒತ್ತಡ ನಿಮ್ಮನ್ನ ಕಾಡುತ್ತಿದ್ದರೂ ಸಹ ಅದನ್ನು ಸಲೀಸಾಗಿ ನಿರ್ವಹಣೆ ಮಾಡಲು ಧ್ಯಾನ ಖಂಡಿತ ನಿಮಗೆ ಸಹಕಾರಿಯಾಗಲಿದೆ ಆದ್ದರಿಂದ ಪ್ರತಿದಿನ ಕನಿಷ್ಠ 5 ರಿಂದ 10 ನಿಮಿಷ ಧ್ಯಾನವನ್ನು ನೀವು ಮನೆಯಲ್ಲೇ ಬಿಡುವಿನ ಸಮಯದಲ್ಲಿ ಮಾಡಬಹುದು.
ಸಾಮಾನ್ಯವಾಗಿ ಮುಟ್ಟು ಹೆಣ್ಣು ಮಕ್ಕಳು 14 ವರ್ಷ ಆದ ಮೇಲೆ ಸಂಭವಿಸುತ್ತೆ ಕೆಲವರಿಗೆ ತಮ್ಮ ಹತ್ತನೇ ವಹಿಸಿನಲ್ಲೂ ಸಹ ಆಗಬಹುದು ಈ ರೀತಿ ಮೊದಲ ಬಾರಿ ಸಂಭವಿಸಿದ ಮೇಲೆ ಹೆಣ್ಣು ಮಗು ಗರ್ಭವತಿಯಾಗಲು ಸಿದ್ದಲಿದ್ದಾಳೆ ಎಂಬುದು ಖಾತ್ರಿ ಆಗುತ್ತೆ. ಹುಟ್ಟು ಮೊದಲ ಬಾರಿ ಶುರುವಾದ ಮೇಲೆ ಪ್ರತಿ ತಿಂಗಳು ತಪ್ಪದೆ ಮುಟ್ಟು ಸಂಭವಿಸುತ್ತೆ ಇಂತಹ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ತುಂಬಾ ಹೊಟ್ಟೆ ನೋವು ನಿಶಕ್ತಿ ಕೆಲವರಿಗೆ ಜ್ವರ ಸಹ ಬರುತ್ತೆ. ದೈಹಿಕವಾಗಿ ಸುದೃಢರಾಗಿಲ್ಲ ಅವರಿಗೆಲ್ಲ ಸಹಜವಾಗಿ ಹಲವು ರೀತಿಯ ತೊಂದರೆಗಳು ಮುಟ್ಟು ಆಗ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ ಇದೇ ಕಾರಣದಿಂದಾಗಿ ಪ್ರತಿನಿತ್ಯ ನೀವು ಪೌಷ್ಟಿಕತೆ ಉಳ್ಳ ಸೇವನೆ ಮಾಡಿದರೆ ಖಂಡಿತ ಇಂತಹ ಸಮಸ್ಯೆಗಳು ನಿಮ್ಮನ್ನ ಕಾಡುವುದಿಲ್ಲ.

ಬಿಳಿ ಮುಟ್ಟು ಆಗಲು ಮಾತ್ರೆ ಸೇವನೆ ಮಾಡಬಹುದೇ
ಕೆಲವರು ಪ್ರಾಯಕ್ಕೆ ಬಂದರೂ ಸಹ ಮುಟ್ಟು ಸಂಭವಿಸುವುದಿಲ್ಲ ಇಂತಹ ಸಂದರ್ಭದಲ್ಲಿ ನೀವು ಗಾಬರಿಯಾಗುವ ಅವಶ್ಯಕತೆ ಇಲ್ಲ ಕೆಲವರಿಗೆ ಇದು ತುಂಬಾ ನಿಧಾನ ವಾಗಿ ಆಗುತ್ತೆ ಕೆಲವರು ಮೊದಲ ಬಾರಿ ಅನುಭವಿಸುತ್ತಾರೆ ಇನ್ನು ಕೆಲವರಿಗೆ ಪ್ರಾಯ ತುಂಬಿದರು ಸಹ ಮುಟ್ಟು ಸಂಭವಿಸುವುದಿಲ್ಲ ಅಂದ ಮಾತ್ರಕ್ಕೆ ನೀವು ಹೆಣ್ಣಲ್ಲ ಎಂದು ಹೇಳಲು ಸಾಧ್ಯವಿಲ್ಲ ಕೆಲವರಿಗೆ ಬಿಳಿ ಮುಟ್ಟು ತುಂಬಾ ನಿಧಾನವಾಗಿ ಸಂಭವಿಸುತ್ತೆ ಇನ್ನೂ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾಗಿ ಬಿಡುತ್ತೆ ಇದಕ್ಕೆ ನಾನಾ ರೀತಿಯ ಕಾರಣಗಳಿವೆ ಬಹುಮುಖ್ಯವಾಗಿ ಇದು heridity ಕಾರಣದಿಂದ ಈ ರೀತಿ ಉಂಟಾಗುತ್ತೆ, ಕೆಲವರು ನನಗೆ ಇನ್ನೂ ಬಿಳಿ ಮುಟ್ಟು ಪ್ರಾರಂಭವಾಗಿಲ್ಲ ಎಂದು ಗಾಬರಿ ಕೊಳ್ಳುತ್ತಾರೆ ಹಾಗೂ ಪೋಷಕರಿಗೆ ಇಂತಹ ಸಂದರ್ಭದಲ್ಲಿ ತುಂಬಾ ಹೆದರಿಕೆ ಉಂಟಾಗುತ್ತೆ ಈ ಕಾರಣದಿಂದಾಗಿಯೇ ಅವರು ಸ್ವಯಂ ಪ್ರೇರಿತ ಕೆಲವು ಮಾತ್ರೆ ಗಳನ್ನು ತಮ್ಮ ಮಗಳಿಗೆ ಸೇವಿಸಲು ಹೇಳುತ್ತಾರೆ ಇದು ನಿಮಗೆ ಏನಾದರೂ ಇಂತಹ ಅನುಮಾನಗಳು ಕಂಡುಬಂದಲ್ಲಿ ನೇರವಾಗಿ ಡಾಕ್ಟರ್ ನ ಸಲಹೆಯನ್ನ ಪಡೆದುಕೊಳ್ಳಿ ಈ ರೀತಿ ಮಾಡುವುದರಿಂದ ನಿಮಗೆ ಏನಾದರೂ ದೈಹಿಕವಾಗಿ ತೊಂದರೆ ಉಂಟಾಗಿ ಬಿಳಿ ಮುಟ್ಟು ಆಗದೆ ಹೋಗಿದ್ದರೆ ಡಾಕ್ಟರ್ರು ಸರಿಯಾದ ತಪಾಸಣೆ ಮಾಡಿ ಅದಕ್ಕೆ ಚಿಕಿತ್ಸೆಯನ್ನು ನೀಡುತ್ತಾರೆ ಸ್ವಯಂ ಪ್ರೇರಿತ ಮಾತ್ರೆಗಳನ್ನು ನೀವು ಬಿಳಿ ಮುಟ್ಟು ಆಗಿಲ್ಲ ಎಂದು ತೆಗೆದುಕೊಳ್ಳುವುದು ತುಂಬಾ ತಪ್ಪು.

ಬಿಳಿ ಮುಟ್ಟು ಏಕೆ ಆಗುತ್ತೆ
ಎಲ್ಲಾ ಹೆಣ್ಣು ಮಕ್ಕಳಲ್ಲಿ ಪ್ರಾಯಕ್ಕೆ ಬಂದ ನಂತರ ಬಿಳಿ ಮುಟ್ಟು ಎನ್ನುವುದು ಪ್ರಾರಂಭವಾಗುತ್ತೆ ಹಾಗಾಗಿ ನೀವು ಚಿಂತಿಸುವ ಅವಶ್ಯಕತೆ ಇಲ್ಲ ಹೆಣ್ಣು ಮಕ್ಕಳಲ್ಲಿ ಗರ್ಭಕೋಶ ಬೆಳವಣಿಗೆ ಹೊಂದಿದ ನಂತರ ಮೊಟ್ಟೆ ಬಿಡುಗಡೆಯಾಗಲು ಪ್ರಾರಂಭವಾಗುತ್ತೆ ಇದು ಮೂರರಿಂದ ಏಳು ದಿನಗಳವರೆಗೆ ಗರ್ಭಾಶಯದಲ್ಲಿ ಇರುತ್ತೆ ನಂತರ ಇದು ಬಿಳಿ ಮುಟ್ಟಿನ ರೀತಿಯಲ್ಲಿ ವರ ಬರುತ್ತೆ ಈ ರೀತಿ ಆದಾಗ ಹೆಣ್ಣು ಮಕ್ಕಳು ತುಂಬಾ ಭಯಗೊಳ್ಳುತ್ತಾರೆ ಮೊದಲ ಬಾರಿ ಪ್ರಾರಂಭವಾದಾಗ ಕೆಲವರಿಗೆ ಬಿಳಿ ಮುಟ್ಟು ರಕ್ತದ ಜೊತೆ ಸಹ ಬರುತ್ತೆ ಈ ರೀತಿ ಆಗುವುದು ತುಂಬಾ ಸಹಜ ಹಾಗಾಗಿ ನೀವು ಚಿಂತಿಸುವ ಅವಶ್ಯಕತೆ ಬೇಡ ಅಕಸ್ಮಾತ್ ಏನಾದರೂ ನಿಮಗೆ ತುಂಬಾ ನೋವಾದರೆ, ಡಾಕ್ಟರ್ ಅನ್ನ ಸಂಪರ್ಕಿಸಿ ಖಂಡಿತ ಅವರು ನಿಮಗೆ ಇದಕ್ಕೆ ಸಂಪೂರ್ಣ ಪರಿಹಾರವನ್ನು ನೀಡುತ್ತಾರೆ.

ಬಿಳಿ ಮುಟ್ಟು ಯಾವಾಗ ಸಂಭವಿಸುತ್ತೆ ಹೆಣ್ಣು ಮಕ್ಕಳಲ್ಲಿ
ಪ್ರತಿ ಹೆಣ್ಣು ಈ ಬಿಳಿ ಮುಟ್ಟಿನ ಸಮಸ್ಯೆಯಿಂದ ಬಳಲಿದ್ದಾರೆ ಯಾವಾಗ ಹೆಣ್ಣು ಮಗು ಪ್ರಾಯ ಬಯಸನ್ನ ತಲುಪುತ್ತಾಳೆ ಆವಾಗ ಗರ್ಭಾಶಯದಲ್ಲಿ ಮೊಟ್ಟೆ ಉತ್ಪತ್ತಿಯಾಗಲು ಪ್ರಾರಂಭವಾಗುತ್ತೆ ಇದು ಕೇವಲ ಏಳು ದಿನದವರೆಗೆ ಮಾತ್ರ ಅಂಡಾಶಯದಲ್ಲಿ ಇರುತ್ತೆ ನಂತರ ಬಿಳಿ ಲೋಳೆ ರಸದ ರೀತಿ ಹೊರಗಡೆ ಬರುತ್ತೆ ಕೆಲವರಿಗೆ ರಕ್ತ ಮಿಶ್ರಿತ ಬಿಳಿ ಮುಟ್ಟು ಸಹ ಉಂಟಾಗುತ್ತದೆ, ಯಾರು ಸುದೃಢವಾಗಿ ಆರೋಗ್ಯದ ಬಗ್ಗೆ ಕಾಳಜಿಯನ್ನ ವಹಿಸಿ ಒಳ್ಳೆಯ ಊಟವನ್ನು ಹಾಗೂ ಎಕ್ಷ್ಕೆರ್ಸೈಜ್ ಮಾಡುತ್ತಿದ್ದಾರೆ ಅವರಿಗೆ ಈ ಮುಟ್ಟಿನ ನೋವಿನ ಪ್ರಮಾಣ ತುಂಬಾ ಕಡಿಮೆ ಇರುತ್ತೆ ಆದರೆ ಅತಿ ಹೆಚ್ಚು ಮಹಿಳೆಯರಲ್ಲಿ ಈ ಬಿಳಿ ಮುಟ್ಟು ಆದ ದಿನ ಹೊಟ್ಟೆಯಲ್ಲಿ ನೋವು, ಸುಸ್ತು ಸಹ ಉಂಟಾಗುತ್ತದೆ. ಕೆಲವು ಮಹಿಳೆಯರಲ್ಲಿ ಬಿಳಿ ಮುಟ್ಟು ಸಹಜವಾಗಿ ಸಂಭವಿಸುವುದಿಲ್ಲ ಇದಕ್ಕೆ ನಾನಾ ರೀತಿಯ ಕಾರಣಗಳಿವೆ. ವಂಶ ಪರಂಪರೆಯಾಗಿ ಬರುವ ಕೆಲವು ರೋಗಗಳು ಸಮಸ್ಯೆ ಸಕ್ಕರೆ ಕಾಯಿಲೆ ಮುಂತಾದ ಸಮಸ್ಯೆಯಿಂದ ಯಾರೆಲ್ಲ ಬಳಲುತ್ತಿದ್ದಾರೆ ಅವರಿಗೆ ಪ್ರತಿ ತಿಂಗಳು ಮುಟ್ಟು ಸರಿಯಾಗಿ ಆಗುವುದಿಲ್ಲ ಇಂತಹ ಸಂದರ್ಭದಲ್ಲಿ ತಮ್ಮಷ್ಟಕ್ಕೆ ತಾವೇ ಔಷಧಿಯನ್ನು ತೆಗೆದುಕೊಳ್ಳುವುದನ್ನು ಮಹಿಳೆಯರು ಆದಷ್ಟು ದೂರ ಮಾಡಬೇಕು ಯಾರಿಗೆಲ್ಲ ಪ್ರತಿ ತಿಂಗಳು ಮುಟ್ಟು ಸರಿಯಾಗಿ ಆಗುತ್ತಿಲ್ಲ ಅವರು ಡಾಕ್ಟರ್ ಅನ್ನ ಸಂಪರ್ಕಿಸಿ ಪರಿಹಾರವನ್ನು ಪಡೆದುಕೊಳ್ಳಬೇಕು ಇದೆ ಉತ್ತಮ ಪರಿಹಾರ.
ಮುಟ್ಟು ಪ್ರತಿ ತಿಂಗಳು ಮಹಿಳೆಯರಿಗೆ ಆಗುತ್ತೆ ಪ್ರತಿ 30 ದಿನಗಳ ಅಂತರದಲ್ಲಿ ಈ ಮುಟ್ಟು ಸಂಭವಿಸುತ್ತೆ ಯಾರೆಲ್ಲಾ ಕಾಯಿಲೆ ಅಥವಾ ಕೆಲವು ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅವರಿಗೆ ಮುಟ್ಟು ಸರಿಯಾದ ಸಮಯಕ್ಕೆ ಆಗೋದಿಲ್ಲ ಈ ರೀತಿ ಆಗುವುದರಿಂದ ಮಕ್ಕಳ ಭಾಗ್ಯ ಅಷ್ಟು ಸುಲಭವಾಗಿ ದೊರೆಯುವುದಿಲ್ಲ ಇಂಥವರು ಡಾಕ್ಟರ್ ನೆರವು ಪಡೆದುಕೊಳ್ಳಬಹುದು, ನಮ್ಮ ಭಾರತದಂತಹ ದೇಶದಲ್ಲಿ ಪೋಷಕರು ಅದರಲ್ಲೂ ತಾಯಿ ತನ್ನ ಮಗಳಿಗೆ ಬಿಳಿ ಮುಟ್ಟು ಏಕೆ ಸಂಭವಿಸುತ್ತೆ ಇದರಿಂದ ಏನೆಲ್ಲಾ ತೊಂದರೆಗಳು ಉಂಟಾಗುತ್ತೆ ಈ ರೀತಿ ಉಂಟಾದಾಗ ಯಾವೆಲ್ಲ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂಬುದನ್ನು ನನ್ನ ತಾಯಿ ಮಗಳಿಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಬೇಕು ಆದರೆ ಅದು ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಈ ಕಾರಣದಿಂದಾಗಿ ಹೆಣ್ಣು ಮಕ್ಕಳು ಬಿಳಿ ಮುಟ್ಟು ಆದ ಸಂದರ್ಭದಲ್ಲಿ ತುಂಬಾ ನೋವಾದರೂ ಸಹ ತನ್ನ ತಾಯಿಯ ಜೊತೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ, ತುಂಬಾ ನಾಚಿಕೆ ಸ್ವಭಾವ ಇರುವ ಹೆಣ್ಣು ಮಕ್ಕಳು ಇದನ್ನ ಹಾಗೆ ಬಿಟ್ಟುಬಿಡುತ್ತಾರೆ ಡಾಕ್ಟರ ನೆರವನ್ನು ಸಹ ಪಡೆದುಕೊಳ್ಳುವುದಿಲ್ಲ ಇಂಥವರಿಗೆ ಮುಂದೆ ಮಕ್ಕಳ ಭಾಗ್ಯ ಸುಲಭವಾಗಿ ದೊರಕುವುದಿಲ್ಲ ತುಂಬಾ ಗಂಭೀರ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಅವರು ಡಾಕ್ಟರ್ ನೆರವು ಆದಷ್ಟು ಬೇಗ ಪಡೆಯುವುದು ಸೂಕ್ತ.

ಬಿಳಿ ಮುಟ್ಟಿನ ಬಗ್ಗೆ ಹೆಣ್ಣು ಮಕ್ಕಳಲ್ಲಿ ಭಯ ಇರುವುದು ಏಕೆ
ಇದಕ್ಕೆ ಮೂಲ ಕಾರಣ ಬಿಳಿ ಮುಟ್ಟಿನ ಬಗ್ಗೆ ಸರಿಯಾದ ವಿಷಯಗಳು ಹೆಣ್ಣು ಮಕ್ಕಳಿಗೆ ಗೊತ್ತಿಲ್ಲದೇ ಇರುವುದು ನಮ್ಮ ಶಾಲಾ-ಕಾಲೇಜುಗಳನ್ನು ಸಹ ಇದರ ಬಗ್ಗೆ ಕೆಲವು ಪಾಠಗಳನ್ನು ಪುಸ್ತಕದಲ್ಲಿ ಹಾಕಬೇಕು ಈ ರೀತಿ ಮಾಡಿದರೆ ಚಿಕ್ಕ ವಯಸ್ಸಿನಲ್ಲೇ ಸಂಪೂರ್ಣ ಮಾಹಿತಿ ಹೆಣ್ಣುಮಕ್ಕಳಿಗೆ ಸಿಗುತ್ತದೆ ಇಲ್ಲವಾದಲ್ಲಿ ಯಾರೆಲ್ಲಾ ಬಿಳಿ ಮುಟ್ಟಿನ ಸಮಸ್ಯೆಯಿಂದ ಅರಳುತ್ತಿದ್ದಾರೆ ಅವರಿಗೆ ಮಾರ್ಗದರ್ಶನ ಸರಿಯಾದ ರೀತಿಯಲ್ಲಿ ಸಿಗೋದಿಲ್ಲ ಕಾಲೇಜಿನ ಮಕ್ಕಳಲ್ಲೂ ಸಹ ಇದರ ಬಗ್ಗೆ ಅರಿವು ಮೂಡಿಸುವುದು ತುಂಬಾ ಅವಶ್ಯ ಯಾವಾಗ ಸಣ್ಣ ಪ್ರಮಾಣದ ತೊಂದರೆಗಳು ಹೆಣ್ಣು ಮಕ್ಕಳಲ್ಲಿ ಉಂಟಾಗುತ್ತೆ ಆಗಲೇ ಇದರ ಬಗ್ಗೆ ಸಂಪೂರ್ಣ ಜವಾಬ್ದಾರಿಯನ್ನ ತೆಗೆದುಕೊಂಡು ಪರಿಹಾರವನ್ನು ಹುಡುಕಿಕೊಂಡರೆ ದೊಡ್ಡ ಪ್ರಮಾಣದ ಸಮಸ್ಯೆಗಳು ಉಂಟಾಗುವುದಿಲ್ಲ ಮನೆಯಲ್ಲಿ ತಾಯಿ ಇದರ ಬಗ್ಗೆ ಮಾಹಿತಿಯನ್ನು ಹೊಂದಿರುತ್ತಾಳೆ ಹಾಗಾಗಿ ತನ್ನ ಮಗುವಿಗೆ ಬಿಳಿ ಮುಟ್ಟಿನ ಸಮಸ್ಯೆ ಉಂಟಾಗದಂತೆ ಸಂಪೂರ್ಣ ಮಾಹಿತಿಯನ್ನ ನೀಡಬೇಕು ಅಕಸ್ಮಾತಾಗಿ ಏನಾದರೂ ಸಮಸ್ಯೆಗಳು ದೈಹಿಕವಾಗಿ ಹೆಣ್ಣು ಮಗು ಎದುರಿಸುತ್ತಿದ್ದರೆ ಅವಳಿಗೆ ಏನೆಲ್ಲ ಮುಂಜಾಗ್ರತ ಕ್ರಮವನ್ನು ತೆಗೆದುಕೊಂಡು ಈ ಸಮಸ್ಯೆಯಿಂದ ಹೊರಬರಬೇಕು ಎಂಬುದನ್ನು ತಾಯಿ ಹೇಳಿಕೊಡಬೇಕು ತುಂಬಾ ಗಂಭೀರ ಸಮಸ್ಯೆ ಏನಾದರೂ ಉಂಟಾದರೆ ಡಾಕ್ಟರ್ ನೆರವು ಪಡೆದು ಆ ಸಮಸ್ಯೆಯಿಂದ ಸಂಪೂರ್ಣವಾಗಿ ಹೊರ ಬರಬಹುದು.