91 ನುಡಿಗಟ್ಟುಗಳು - Nudigattugalu in Kannada

ಗ್ರಾಮೀಣ ಪ್ರದೇಶದಲ್ಲಿ ಜನರು ಹೆಚ್ಚಾಗಿ nudigattugalu in kannada ಬಳಸಿ ಮಾತನಾಡುತ್ತಾರೆ ಅಂತಹ ಸಂದರ್ಭದಲ್ಲಿ ನಗರ ಪ್ರದೇಶದ ಜನರಿಗೆ ಸರಿಯಾಗಿ ಅರ್ಥ ಆಗುವುದಿಲ್ಲ ಈ ಕಾರಣಕ್ಕಾಗಿ ಮುಜುಗರ ಪಡಬೇಕಾಗುತ್ತದೆ ಇನ್ನು ನೀವು ಇಲ್ಲಿ ನೀಡಿರುವ ನುಡಿಗಟ್ಟುಗಳನ್ನು ಓದಿ ತಿಳಿದುಕೊಂಡು ಸುಲಭವಾಗಿ ಗ್ರಾಮೀಣ ಪ್ರದೇಶದ ಜನರೊಂದಿಗೆ ಬರೆಯಬಹುದು ಹಾಗೂ ನಮ್ಮ ಕನ್ನಡದ ಹಳೆಯ ಭಾಷೆ ಅರ್ಥಮಾಡಿಕೊಳ್ಳುವಲ್ಲೂ ಸಹ ಇದು ಸಹಕಾರಿಯಾಗಿದೆ.


ನಿಮಗೆ ಉಪಯೋಗವಾಗಲಿ ಎಂದು 100 ನುಡಿಗಟ್ಟುಗಳನ್ನು ಇಲ್ಲಿ ನೀಡಿದ್ದೇವೆ
ಪ್ರಪಂಚ ಕಾಣದವ = ಅನುಭವವಿಲ್ಲದವ
ಬಣ್ಣಕಟ್ಟು = ಇಲ್ಲದಿರುವುದನ್ನು ಸೇರಿಸು
ಬಾಲೆಗೆ ಬೀಳು = ವಶಕ್ಕೆ ಸಿಕ್ಕು
ಬಿಸಿ ಬಿಸಿ ಸುದ್ದಿ = ಆಗ ತಾನೇ ಪ್ರಕಟವಾದ ಸುದ್ದಿ
ಬೆನ್ನು ತಟ್ಟು = ಪ್ರೋತ್ಸಾಹಿಸು
ಮಿನಾ ಮೇಷ ಎಣಿಸು = ಹಿಂದೆ ಮುಂದೆ ನೋಡು
ಮೆಲಕು ಹಾಕು = ಹಳೆಯದನ್ನು ನೆನಪಿಸಿಕೋ
ಸಿಗಿದು ತೋರಣ ಕಟ್ಟು- ಉಗ್ರವಾಗಿ ಶಿಕ್ಷಿಸುವುದು
ಹಳ್ಳಕ್ಕೆ ಬೀಳು = ಮೋಸಹೋಗು
ಎರಡು ನಾಲಿಗೆಯವ- ಮಾತು ಬದಲಿಸುವವ
ಭೂಮಿಗೆ ಭಾರ = ನಿಷ್ಪ್ರಯೋಜಕ
ಭೂಮಿ ತೂಕದ ಮನುಷ್ಯ = ತಾಳ್ಮೆಯ ಮನುಷ್ಯ
ಮಂಗಮಾಯ = ಇದ್ದಕಿದ್ದಂತೆ ಇಲ್ಲವಾಗುವುದು
ಕತ್ತಿ ಮಸೆ = ದ್ವೇಷ ಸಾಧಿಸು
ರೆಕ್ಕೆಪುಕ್ಕ ಕಳೆದುಕೊ = ಶಕ್ತಿಯನ್ನು ಕಳೆದುಕೊ
ಎದೆಯ ಮೇಲೆ ಭಾರ ಇಳಿ = ಹೊಣೆಗಾರಿಕೆ ಕಡಿಮೆಯಾಗು
ಎತ್ತಂಗಡಿಯಾಗು- ವರ್ಗವಾಗು
ಉಪ್ಪುಖಾರ ಹೆಚ್ಚು = ಇಲ್ಲದನ್ನು ಸೇರಿಸು

Nudigattugalu in Kannada
ಎಂಜಲು ಕೈಯಲ್ಲಿ ಕಾಗೆ ಓಡಿಸಿದವ = ಜಿಪುಣ
ಕೈ ಮಿರು- ನಿಯಂತ್ರಣ ತಪ್ಪು
ಅರೆದು ಕುಡಿಸು = ಚೆನ್ನಾಗಿ ತಿಳಿಯುವಂತೆ ಹೇಳಿಕೊಡು
ಅಬ್ಬೇಪಾರಿ = ಜವಾಬ್ದಾರಿ ಇಲ್ಲದವ
ಮುಳುಗಿ ಹೋಗು = ಎಲ್ಲವನ್ನು ಕಳೆದುಕೊಳ್ಳುವುದು
ಚಳ್ಳೆ ಹಣ್ಣು ತಿನ್ನಿಸು = ತಕ್ಕ ಪಾಠ ಕಲೀಸು
ಮಂಗಳಾರತಿ ಎತ್ತು = ಅವಮಾನ ಮಾಡು
ಹೊಟ್ಟೆಗೆ ಹಾಕಿಕೋ = ಕ್ಷಮಿಸು
ಹಾಲು ತುಪ್ಪದಲ್ಲಿ ಕೈ ತೊಳೆ = ಸಮೃದ್ಧ ಜೀವನ
ಮುಖಕ್ಕೆ ಮಸಿ ಹಚ್ಚು = ಕಳಂಕ ತರು
ಬೆನ್ನು ಹತ್ತು = ಹಿಂಬಾಲಿಸು
ಗಂಟಲು ದೊಡ್ಡದು ಮಾಡು = ಗಟ್ಟಿಯಾಗಿ ಕೂಗಿ ಮಾತಾಡು
ಗತಿ ಕಾಣಿಸು = ಮುಗಿಸು
ಗಾಳಿಗೆ ತೂರಿಬಿಡು = ನಿರ್ಲಕ್ಷಿಸು

100 ನುಡಿಗಟ್ಟುಗಳು with Meaning
ಗುಡ್ಡವನ್ನು ಬೆಟ್ಟ ಮಾಡು = ಸಣ್ಣದನ್ನು ದೊಡ್ಡದು ಮಾಡಿ ಹೇಳು
ಚಳ್ಳೆಹಣ್ಣು ತಿನ್ನುಸು = ಕಷ್ಟಕೊಡು
ಜೇಬಿಗೆ ತೂತು ಬೀಳು = ಹಣ ಖರ್ಚಾಗು
ಡಂಗುರ ಹೋಡೆ = ಘೋಷಿಸು
ತನ್ನ ಕಾಲು ಮೇಲೆ ತಾನು ನಿಲ್ಲು = ಸ್ವಾವಲಂಬಿಯಾಗು
ತಲೆ ಓಡದಿರು = ಏನು ತೋಚದಿರು
ತಲೆ ಕೊಡು = ಭಾಗವಹಿಸು
ತಲೆ ತಿನ್ನು = ಕಾಡು
ತಲೆದೂಗು = ಮೆಚ್ಚುಗೆ ವ್ಯಕ್ತ ಪಡಿಸು
ತಲೆ ಮೇಲೆ ಕಲ್ಲು ಹಾಕು = ತೊಂದರೆಯನ್ನುಂಟು ಮಾಡು
ತಲೆಯ ಮೇಲೆ ಕೈ ಇಟ್ಟು ಕೂರುವುದು = ಏನು ತೋಚದಿರು
ತಾಳಕ್ಕೆ ಸರಿಯಾಗಿ ಹೆಜ್ಜೆಹಾಕು = ಹೇಳಿದಂತೆ ಕೇಳು
ತಿಂದು ತೇಗು = ಬರಿದು ಮಾಡು
ತಿರುಕನ ಕನಸು = ನನಸಾಗದ ಇಚ್ಛೆ
ತೊಡೆ ತಟ್ಟಿ ನಿಲ್ಲು = ಜಗಳಕ್ಕೆ ನಿಲ್ಲು
ಧೂಳಿಪಟ ಮಾಡು = ನಾಶ ಮಾಡು
ನಡು ನೀರಲ್ಲಿ ಕೈ ಬಿಡು = ಅರ್ಧದಲ್ಲೇ ಸಂಚಾರ ನಿಲ್ಲಿಸು
ನುಂಗಿ ನೀರು ಕುಡಿ = ನಾಶ ಮಾಡು

100 ನುಡಿಗಟ್ಟುಗಳು pdf
ಪ್ರಾಣ ಹಿಂಡು = ಬಹಳ ಪೀಡಿಸು
ಬಣ್ಣ ಬಯಲಿಗೆ ಬರು = ರಹಸ್ಯ ಬಯಲಾಗು
ಬಾಲ ಕತ್ತರಿಸು = ಸೊಕ್ಕು ಮುರಿ
ಬಣ್ಣ ಹೆಚ್ಚು- ನಯವಾಗಿ ಮಾತಾಡು
ಮಣ್ಣು ಪಳಗು = ಹಾಳಾಗು
ಮೂರೂ ಕಾಸಿನವ = ಮರ್ಯಾದೆಯಿಲ್ಲದವ
ರೈಲು ಬಿಡು- ಸುಳ್ಳು ಹೇಳು
ಹದ್ದಿನ ಕಣ್ಣು = ತೀಕ್ಷ್ಣ ಕಣ್ಣು
ಅಜ್ಜಿ ಕಥೆ = ಬಹಳ ಪುರಾತನ ಕತೆ
ಉಭಯ ಸಂಕಟ = ಸಂಧಿಗ್ದ ಪರಿಸ್ಥಿತಿ
ಮಂಗಳ ಹಾಡು = ಮುಕ್ತಾಯ
ಬುಸುಗುಟ್ಟು = ಕೋಪಗೊಳ್ಳು
ಅಜಗಜಾಂತರ = ಭಾರಿ ವ್ಯತ್ಯಾಸ

100 ನುಡಿಗಟ್ಟುಗಳು with Meaning
ಹೊಂಚು ಹಾಕು = ಸಮಯ ಸಾಧಿಸು
ಹಾಸಿಗೆ ಹಿಡಿ = ಕಾಯಿಲೆ ಬೀಳುವುದು
ಎದೆ ಭಾರವಾಗು = ದುಃಖವಾಗು
ಎತ್ತಿದ ಕೈ- ಪ್ರವೀಣ
ಎದೆ ತುಂಬಿಬರು = ಭಾವೋದ್ವೇಗಉಂಟಾಗು
ಅಗ್ನಿಪರೀಕ್ಷೆ = ಕಠಿಣವಾದ ಪರೀಕ್ಷೆ
ಕೋಳಿ ನಿದ್ದೆ- ಸ್ವಲ್ಪ ನಿದ್ದೆ
ಅಮಾವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ = ಬಹಳ ಅಪರೂಪವಾಗಿ
ಮೂಗು ತೂರಿಸು- ಎಲ್ಲ ವಿಚಾರಕ್ಕೂ ತಲೆ ಹಾಕು
ಗುಂಡಿಗೆ ತಳ್ಳು = ನಂಬಿಸಿ ಮೋಸ ಮಾಡು
ಬೆವರು ಸುರಿಸು = ಕಷ್ಟಪಡು
ಹಿತ್ತಾಳೆ = ಚಾಡಿ ಮಾತು ಕೇಳುವ ಸ್ವಭಾವ
ಹೊಟ್ಟೆ ತಣ್ಣಗಾಗು = ತೃಪ್ತಿಯಾಗು
ಮನೆ ಬೆಳಗಿಸು = ಉದ್ದಾರ ಮಾಡು
ಮೈ ಚಳಿ ಬಿಡು = ಸಂಕೋಚ ಬಿಡು
ಬಿಳಿ ಮಜ್ಜಿಗೆ = ಹೆಂಡ
ಗಂಟುಕಟ್ಟು = ಹೋರಾಡಲು ಸಿದ್ಧವಾಗು
ಗಾಯದ ಮೇಲೆ ಬರೆ ಎಳೆ = ಕಷ್ಟದ ಮೇಲೆ ಕಷ್ಟ ಕೊಡು
ಗಾಳಿ ಸಮಾಚಾರ = ಖಚಿತವಲ್ಲದ ವಾರ್ತೆ

Nudigattugalu in Kannada
ಚಕಾರವೆತ್ತು- ಆಕ್ಷೇಪಣೆ ಮಾಡು
ಜನ್ಮ ಜಾಲಾಡು = ಚೆನ್ನಾಗಿ ಬಯ್ಯು
ಟೋಪಿ ಹಾಕು = ಮೋಸ ಮಾಡು
ತಣ್ಣೀರೆರಚು = ಉತ್ಸಾಹ ಭಂಗ ಮಾಡು
ತಲೆ ಎತ್ತಿ ತಿರುಗು = ಮರ್ಯಾದೆಯಿಂದ ಬಾಳು
ತಲೆ ಕೆರೆ- ಚಿಂತಿಸು
ತಲೆಗೆ ಹಚ್ಚಿಕೋ = ಬಹಳವಾಗಿ ಚಿಂತಿಸು
ತಲೆ ತೊಳೆದುಕೊ = ಸಂಬಂಧವನ್ನು ಸಂಪೂರ್ಣವಾಗಿ ಕಳೆದುಕೊ
ತಲೆ ಬಿಸಿಯಾಗು = ಕೋಪ
ತಲೆ ಮೇಲೆ ಕುರಿಸಿಕೋ = ತುಂಬ ಸಲಿಗೆ ಕೊಡು
ತಲೆಯಾಡಿಸು = ಸಮ್ಮತಿ ಸೂಚಿಸು
ತಾಳ ಮೇಳವಿಲ್ಲದಿರುವುದು = ಹೊಂದಾಣಿಕೆಯಿಲ್ಲದಿರು
ತಿಪ್ಪರಲಾಗ ಹಾಕು = ಶಕ್ತಿ ಮೀರಿ ಯತ್ನಿಸು
ತಿರುಗಿ ಬೀಳು = ವಿರೋಧಿಸು
ದಡ ಕಾಣಿಸು = ಸಮಸ್ಯೆ ಬಗೆಹರಿಸು
ದಿನ ಎಣಿಸು = ಸಾವನ್ನು ಎದುರು ನೋಡು
ನಾಲಿಗೆ ಉದ್ದಮಾಡು = ಅತಿಯಾಗಿ ಮಾತಾಡು
ನುಣ್ಣಗೆ ಮಾಡು = ಸಂಪೂರ್ಣವಾಗಿ ಹಾಳು ಮಾಡು
ನುಡಿಗಟ್ಟು ಎಂದರೆ ಕನ್ನಡ ಪದಗಳಿಗೆ ವಿಶೇಷ ಅರ್ಥವನ್ನು ನೀಡುವ ಅಕ್ಷರಗಳಾಗಿರುತ್ತವೆ ವಿಶೇಷ ರೀತಿಯ ಅಕ್ಷರಗಳನ್ನು ಒಳಗೊಂಡ ಸಮೂಹ ಪದಗಳಾಗಿರುತ್ತವೆ nudigattugalu in kannada ಸಾಮಾನ್ಯವಾಗಿ ಬಳಸುವ ಕೆಲವು ನುಡಿಗಟ್ಟುಗಳನ್ನ ಇಲ್ಲಿ ಹೆಸರಿಸಲಾಗಿದೆ ಆದರೆ ಇದೇ ರೀತಿ ಹಲವು ನುಡಿಗಟ್ಟುಗಳಿದ್ದು ಪ್ರತಿದಿನ ಸಾಮಾನ್ಯ ಭಾಷೆಯಂತೆ ಬಳಸಲಾಗುತ್ತದೆ. ಗಾದೆಯಂತೆ ನುಡಿಗಟ್ಟುಗಳು ಇದ್ದರೂ ಸಹ ಕೆಲವು ಅಕ್ಷರಗಳು ವಿಸ್ತಾರವಾದ ವಿಶ್ಲೇಷಣೆಯನ್ನು ನೀಡುತ್ತವೆ ಈ ಕಾರಣಕ್ಕಾಗಿಯೇ ನುಡಿಗಟ್ಟು ತುಂಬಾ ವಿಶೇಷ ಸ್ಥಾನವನ್ನ ನೀಡಲಾಗಿದೆ.