Here we are providing few tips and ideas about letter writing in Kannada, there are many ways you can write letter we have mentioned many ways, and types of letter writing in Kannada. Just go through the our article and learn how you can write sufficiently.
ನೀವು ಕನ್ನಡದಲ್ಲಿ ಹೇಗೆ Letter ನ್ನು ಬರೆಯಬೇಕು ಎಂಬ ಉದ್ದೇಶದಿಂದ ಹುಡುಕಾಟ ನಡೆಸಿದ್ದಾರೆ ಖಂಡಿತವಾಗಿಯೂ ನೀವು ಇಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಿದ್ದೀರಿ. ಪತ್ರ ಬರೆಯುವುದರಲ್ಲಿ ಹಲವು ಪ್ರಕಾರಗಳಿವೆ ಔಪಚಾರಿಕ ಪತ್ರ ಹಾಗೂ ಅನೌಪಚಾರಿಕ ಪತ್ರ. ಉದಾಹರಣೆ ಸಹಿತ ನಿಮಗೆ ಅರ್ಥವಾಗಲೆಂದು ಸಂಪೂರ್ಣವಾಗಿ ನಮ್ಮ ಲೇಖನದಲ್ಲಿ ತಿಳಿಸಿದ್ದೇವೆ ತಪ್ಪದೆ ಕೊನೆಯವರೆಗೂ ಓದಿ ಮಾಹಿತಿಯನ್ನು ತಿಳಿದುಕೊಳ್ಳಿ.
ಔಪಚಾರಿಕ ಪತ್ರ / Formal Letter Writing tips
ಔಪಚಾರಿಕ ಪತ್ರವನ್ನು ಬರೆಯುವುದು ಕೆಲವು ಸ್ಥಳಗಳಲ್ಲಿ ಇನ್ನೂ ಬಳಕೆಯಲ್ಲಿದೆ ಉದಾಹರಣೆಗೆ ಬ್ಯಾಂಕು ಸರ್ಕಾರಿ ಕಚೇರಿ ವಿದ್ಯುತ್ ಕಚೇರಿ ಶಾಲಾ- ಕಾಲೇಜುಗಳಲ್ಲಿ ಇದರ ಜಾತಿ ಹೆಚ್ಚಾಗಿದೆ ಇಂತಹ ಸಂದರ್ಭದಲ್ಲಿ ನೀವು ಸಂಪೂರ್ಣವಾದ ಮಾಹಿತಿಯನ್ನು ಕೇವಲ ಒಂದು ಸಾಲಿನಲ್ಲಿ ಮಾತ್ರ ಬರೆಯಬೇಕು ಈ ರೀತಿ ನೀವು ಬರೆಯಬೇಕಾದರೆ ಖಂಡಿತ ವಿಷಯಗಳನ್ನು ಸಾರಾಂಶದ ರೂಪದಲ್ಲಿ ಪ್ರಸ್ತುತ ಪಡಿ ಸಬೇಕು ಏಕೆಂದರೆ ಮಾದರಿಯ ಪತ್ರದಲ್ಲಿ ಕೇವಲ 5 ರಿಂದ 10 ಸಾಲುಗಳನ್ನು ಮಾತ್ರ ನೀವು ಬರೆಯಬೇಕಾಗಿರುತ್ತದೆ.
ಈ ರೀತಿಯ ಔಪಚಾರಿಕ ಪತ್ರಗಳನ್ನು ಬರೆಯುವಾಗ ಯಾವಾಗಲೂ ನೆನಪಿನಲ್ಲಿಡಿ ಸರಳವಾಗಿ ಪತ್ರ ಬರೆಯಬೇಕು. ಈ ಮಾದರಿಯ ಪತ್ರ ನೀವು ಸಾಮಾನ್ಯವಾಗಿ ಬರೆಯುವಾಗ ಯಾವುದೇ ರೀತಿಯ ಕೌಶಲ್ಯದ ಅವಶ್ಯಕತೆ ಇರುವುದಿಲ್ಲ ನೀವು ತಿಳಿಸಬೇಕಾದ ಮಾಹಿತಿಯನ್ನು ಕೇವಲ ಎರಡು ಸಾಲಗಳಲ್ಲೇ ತಿಳಿಸಬಹುದಾಗಿದೆ, ಈ ಕೆಳಗೆ ಕೆಲವು ಎಕ್ಸಾಂಪಲ್ಗಳನ್ನು ನಾವು ನೀಡಿದ್ದೇವೆ ದಯವಿಟ್ಟು ಹೋಗಿ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.
Formal Letter Writing Format Given Below
Our Address/ವಿಳಾಸ
Date/ದಿನಾಂಕ
Subject Line/ಸಬ್ಜೆಕ್ಟ್ ಟೈಟಲ್
To Address/ವಿಳಾಸ
Letter Body/ಲೆಟರ್ನ ಬಾಡಿ
Signature/ಸಿಗ್ನೇಚರ್
Name of Senders/ನಿಮ್ಮ ಹೆಸರು
Your Signature/ಸಿಗ್ನೇಚರ್
ದಿನಾಂಕ:
ನೀವು ಲೆಟರ್ ಅನ್ನು ಬೇರೆಯೊಬ್ಬರಿಗೆ ಕಳಿಸುತ್ತಿದ್ದೀರಾ ಅಕಸ್ಮಾತ್ ಡೆಲಿವರಿ ಆಗದೆ ಮತ್ತೆ ರಿಟರ್ನ್ ಬರಬೇಕಾದರೆ ನಿಮ್ಮ ವಿಳಾಸವನ್ನು ನೀವು ಬರೆಯುವುದು ಅವಶ್ಯಕ ಏಕೆಂದರೆ ರಿಟರ್ನ್ ಆದ ಲೆಟರ್ ನಿಮ್ಮ ವಿಳಾಸಕ್ಕೆ ವರ್ಗಾಯಿಸಲಾಗುವುದು.
ನೀವು ಯಾವ ದಿನಾಂಕದಂದು ಪತ್ರವನ್ನು ಬರೆಯುತ್ತಿದ್ದೀರಾ ಎಂಬುದು ಅತಿ ಮುಖ್ಯ ಈ ಕಾರಣಕ್ಕಾಗಿ ಪತ್ರ ಬರೆದ ದಿನವನ್ನು ನೀವು ಖಂಡಿತ ಪತ್ರದ ಎಡಗಡೆ ಬರೆಯುವುದು ಅವಶ್ಯಕ.
ವಿಳಾಸ:
ಯಾರಿಗೆ ಪತ್ರವನ್ನು ನೀವು ಬರೆಯುತ್ತಿದ್ದೀರಾ ಎಂಬುದನ್ನು ಸಹ ನಮೂದಿಸುವುದು ಅವಶ್ಯಕತೆ ಇರುತ್ತದೆ ಹೀಗಾಗಿ ನಿಮ್ಮ ವಿಳಾಸ ಬರೆದ ನಂತರ ಯಾರಿಗೆ ನೀವು ಪತ್ರವನ್ನು ಬರೆಯುತ್ತಿದ್ದೀರಾ ಅವರ ವಿಳಾಸವನ್ನು ಸಹ ಬರೆಯುವುದು ಅವಶ್ಯಕ.
ಲೆಟರ್ನ ಬಾಡಿ:
ಯಾವ ವಿಷಯಕ್ಕೆ ನೀವು ಪತ್ರವನ್ನು ಬರೆಯುತ್ತಿದ್ದೀರಿ ಎಂಬುದನ್ನು ಸಂಪೂರ್ಣ ವಿಸ್ತೃತ ರೂಪದಲ್ಲಿ ಬರೆಯಬೇಕು ಕೆಲವೊಮ್ಮೆ ಪತ್ರದಲ್ಲಿ ಹೆಚ್ಚು ವಿಷಯಗಳನ್ನು ಪ್ರಸ್ತಾಪಿಸಲು ಸಾಧ್ಯ ಆಗುವುದಿಲ್ಲ ಆ ಕಾರಣಕ್ಕಾಗಿ ಸಂಕ್ಷಿಪ್ತ ರೂಪದಲ್ಲಿ ನೀವು ತಿಳಿಸಬೇಕಾಗಿರುವ ವಿಷಯವನ್ನು ಬರೆಯಬೇಕಾಗಿರುತ್ತದೆ.
Wishes:
ಪತ್ರದ ಸಾರಾಂಶವನ್ನು ಸಂಕ್ಷಿಪ್ತವಾಗಿ ಬರೆದ ನೀವು ಕೊನೆಯಲ್ಲಿ ಧನ್ಯವಾದಗಳು ಸಹ ನೀವು ತಿಳಿಸಬೇಕಾಗುತ್ತದೆ ಈ ಕಾರಣಕ್ಕಾಗಿ ಕೇವಲ ಒಂದೇ ಲೈನ್ ನಲ್ಲಿ ವಂದನೆಗಳೊಂದಿಗೆ ಎಂದು ನಮೂದಿಸಿ ಪತ್ರವನ್ನು ಎಂಡ್ ಮಾಡಿದರೆ ಸಾಕು.
Closing Words:
ಪತ್ರದ ಕೊನೆಯಲ್ಲಿ ನಿಮ್ಮ ಪ್ರಾಮಾಣಿಕ ಅಥವಾ ನಿಮ್ಮ ವಿಧೇಯ ಎಂಬ ಪದ ಬಳಕೆ ಮಾಡುವುದು ತುಂಬಾ ಅವಶ್ಯಕ.
ನಿಮ್ಮ ಸಹಿ/ Signature
ಇಲ್ಲಿ ನಿಮ್ಮ ಹಸ್ತಾಕ್ಷರವನ್ನು ನಮೂದಿಸುವುದು ತುಂಬಾ ಅವಶ್ಯ. ಪತ್ರವನ್ನು ಕೊನೆಗೊಳಿಸುವಾಗ ನಿಮ್ಮ ಹಸ್ತಕ್ಷರವನ್ನು ಖಂಡಿತವಾಗಿಯೂ ಬರೆಯಬೇಕಾದದ್ದು ನಿಮ್ಮ ಕರ್ತವ್ಯ ಹಾಗಾಗಿ ಕೊನೆಯಲ್ಲಿ ನಿಮ್ಮ ಹಸ್ತಾಕ್ಷರವನ್ನು ಹಾಕಿ.
ಔಪಚಾರಿಕ ಪತ್ರವನ್ನು ಹೀಗೆ ಬರೆಯಿರಿ
ಈ ರೀತಿಯ ಪತ್ರವನ್ನು ಶಾಲಾ ಮಕ್ಕಳು ತಮ್ಮ ಪ್ರಾಧ್ಯಾಪಕರಿಗೆ ಮತ್ತು ಗ್ರಂಥ ಪಾಲಕರಿಗೆ ಬರೆಯುತ್ತಾರೆ. ಉದಾಹರಣೆ ಸಹಿತ ನಾವು ಇಲ್ಲಿ ನಿಮಗೆ ಸಂಪೂರ್ಣ ವಿವರ ನೀಡಿದ್ದೇವೆ. 500 ಪುಸ್ತಕಗಳನ್ನು ಕಳುಹಿಸಿ ಕೊಡುವಂತೆ ದೀಪ ಬುಕ್ ಹೌಸ್ ಗೆ ಪತ್ರ ಬರೆಯಿರಿ. Asume you are an librarian requesting Deepa Book House to send 500 writing books for school kids.
ಇಂದ,
ಜಯನಗರ, ಫೋರ್ತ್ ಕ್ರಾಸ್,
ಬೆಂಗಳೂರು 560004
ದಿನಾಂಕ 12 ಜೂನ್ 2022
ಗೆ,
ಮ್ಯಾನೇಜರ್ ದೀಪ ಬುಕ್ ಹೌಸ್
ಎರಡನೇ ಮೇನ್ ರೋಡ್,
ಮೆಜೆಸ್ಟಿಕ್ ಬೆಂಗಳೂರು 5699873
ಮಾನ್ಯರೇ: ವಿಷಯ ದಯವಿಟ್ಟು 500 ಪುಸ್ತಕಗಳನ್ನ ಮಕ್ಕಳಿಗೆ ರವಾನಿಸಿ ಕೋರಿ ಪತ್ರ.
ಈಗಾಗಲೇ ನಮ್ಮ ಶಾಲೆಯಲ್ಲಿ ಬೋಧನೆ ಪ್ರಾರಂಭಗೊಂಡಿದೆ ಮಕ್ಕಳಿಗೆ 500 ಪುಸ್ತಕಗಳ ಅವಶ್ಯಕತೆ ಇದೆ ಹಾಗಾಗಿ ಬೇಗ ನಿಮ್ಮ ಪುಸ್ತಕ ಭಂಡಾರದಿಂದ ಮಕ್ಕಳಿಗೆ ಬರೆಯುವ ಪುಸ್ತಕಗಳನ್ನು ಕಳುಹಿಸ ಕೊಡಬೇಕು ಎಂದು ನಾವು ಈ ಮೂಲಕ ಕೋರಿ ಪತ್ರ ಬರೆಯುತ್ತಿದ್ದೇವೆ.
ಧನ್ಯವಾದಗಳು.
ತಮ್ಮ ವಿಶ್ವಾಸಿ,
ರಮೇಶ್
(ಗ್ರಂಥಪಾಲಕರು)
ಔಪಚಾರಿಕ ಪತ್ರದ ಮಾದರಿ 2 / Formal Letter Writing in Kannada
ನೀವು ಮೈಸೂರಿನ ನಿವಾಸಿಯಾಗಿದ್ದು ಅಲ್ಲಿನ ಜನರಿಗೆ ನೀರಿನ ಸಮಸ್ಯೆ ಎದುರಾಗಿದೆ ಪರಿಹಾರಕ್ಕಾಗಿ ಪಾಲಿಕೆಯ ಮೇಯರ್ ಗೆ ಪತ್ರ ಹೇಗೆ ಬರೆಯುವುದನ್ನು ಇಲ್ಲಿ ನಿಮಗೆ ಸಂಪೂರ್ಣವಾಗಿ ಉದಾಹರಣೆ ಸಹಿತ ತಿಳಿಸಿದ್ದೀವಿ. You are right now staying in Mysore local people having problem with water facility so you are writing letter to a Mayor of this locality to provide sufficient water facility or to solve this problem.
ಇಂದ,
ಸಂಜೀವ್ ಕುಮಾರ್
ಕುವೆಂಪು ನಗರ ಮೈಸೂರ್ ಎರಡನೇ ಕ್ರಾಸ್
ದಿನಾಂಕ
12 ಜುಲೈ 2022
ಗೆ,
ಮೇಯರ್ ಮೈಸೂರು ನಗರ
ವಿಷಯ: ಕುವೆಂಪು ನಗರದಲ್ಲಿ ನೀರಿನ ಸಮಸ್ಯೆ ಬಗ್ಗೆ ಹರಿಸುವ ಬಗ್ಗೆ ದೂರು.
ಸರ್ / ಮೇಡಂ
ನಾನು ಸಂಜೀವ್ ಕುಮಾರ್ ಕುವೆಂಪು ನಗರದ ನಿವಾಸಿ ಆಗಿದ್ದೇನೆ ಹಲವು ದಿನಗಳಿಂದ ನಮ್ಮ ಕಾಲೋನಿಯಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ ಕೇವಲ ವಾರಕ್ಕೆ ಒಂದು ಬಾರಿ ಅಷ್ಟೇ ನೀರು ಸಿಗುತ್ತಿದೆ ಇದರಿಂದ ಇಲ್ಲಿನ ನಿವಾಸಿಗಳಿಗೆ ತುಂಬಾ ತೊಂದರೆಯಾಗುತ್ತಿದೆ ಆದಕಾರಣ ತಾವು ನಮ್ಮ ಮನವಿಯನ್ನು ಸ್ವೀಕರಿಸಿ ಆದಷ್ಟು ಬೇಗ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ನಾವು ಈ ಮೂಲಕ ಕೇಳಿಕೊಳ್ಳುತ್ತೇವೆ. ನಮ್ಮ ಕಾಲೋನಿಯಲ್ಲಿ ಕೇವಲ ಒಂದೇ ಬೋರ್ವೆಲ್ ಇದೆ ಇಲ್ಲಿ ಸುಮಾರು 5000ಕ್ಕೂ ಅಧಿಕ ಜನರು ವಾಸ ಮಾಡುತ್ತಿದ್ದಾರೆ ಕರೆಂಟ್ನ ಅಭಾವ ಇರುವ ಈ ಪ್ರದೇಶದಲ್ಲಿ ಕೇವಲ ಒಂದು ಬೋರ್ವೆಲ್ನಿಂದ 5000 ಜನಕ್ಕೆ ನೀರು ಸರಬರಾಜು ಮಾಡುವುದು ತುಂಬಾ ಕಷ್ಟ ಆ ಕಾರಣಕ್ಕಾಗಿ ತಾವು ಆದಷ್ಟು ಬೇಗ ನಮಗೆ ಇನ್ನೊಂದು ಬೋರ್ವೆಲ್ ವ್ಯವಸ್ಥೆ ಮಾಡಿ ನಮ್ಮ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಈ ಮೂಲಕ ನಮ್ಮ ಕಾಲೋನಿಯ ಸಮಸ್ತ ಜನರು ಮನವಿ ಮಾಡಿಕೊಳ್ಳುತ್ತಿದ್ದೇವೆ.
ದಯಮಾಡಿ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ ಬೇಗನೆ ನಮಗೆ ಪರಿಹಾರ ಕೊಡಿಸಿ
ನಿಮ್ಮ ವಿಶ್ವಾಸಿ
ಸಂಜೀವ್ ಕುಮಾರ್
ಅನೌಪಚಾರಿಕ ಪತ್ರ ಉದಾಹರಣೆ 1 | Informal letter writing in Kannada example 2
ಗೋವಿಂದ,
ಎರಡನೇ ಕ್ರಾಸ್, ಮೂರನೇ ಅಡ್ಡರಸ್ತೆ.
ದೀಪಕ್ ನಗರ
ಬೆಂಗಳೂರು 56002
ದಿನಾಂಕ: 2 ಏಪ್ರಿಲ್ 2022
ನಮ್ಮ ಪ್ರೀತಿಯ ಚಿಕ್ಕಪ್ಪ,
ಚಿಕ್ಕಪ್ಪ ನಾನು ಇಲ್ಲಿ ಆರೋಗ್ಯವಾಗಿದ್ದೇನೆ ನೀವು ಕೂಡ ಆರೋಗ್ಯದಿಂದ ಇದ್ದೀರಿ ಎಂದು ಭಾವಿಸುತ್ತಿದ್ದೇನೆ ನನ್ನ ಪರೀಕ್ಷೆಗಳು ಈಗಾಗಲೇ ಪ್ರಾರಂಭವಾಗಿದೆ ಚೆನ್ನಾಗಿ ಎಲ್ಲಾ ಪರೀಕ್ಷೆಗಳನ್ನು ನಾನು ಬರೆಯುತ್ತಿದ್ದೇನೆ ಮುಂದಿನ ವಾರ ನನ್ನ ಎಲ್ಲಾ ಪರೀಕ್ಷೆಗಳು ಮುಗಿಯಲಿವೆ ಖಂಡಿತವಾಗಿಯೂ ಆದಷ್ಟು ಬೇಗ ಊರಿಗೆ ಬರುತ್ತೇನೆ ನಿಮ್ಮನ್ನೆಲ್ಲ ನೋಡಬೇಕೆಂಬುವ ಆಸೆ ನನಗೆ ತುಂಬಾ ಆಗುತ್ತಿದೆ ಈಗಾಗಲೇ ಒಂದು ತಿಂಗಳಿಂದ ನಾನು ನನಗೆ ಪರೀಕ್ಷೆ ಇರುವ ಕಾರಣದಿಂದಾಗಿ ಊರಿಗೆ ಬರಲು ಸಾಧ್ಯವಾಗಿಲ್ಲ ಆದಷ್ಟು ಬೇಗ ಪರೀಕ್ಷೆ ಮುಗಿದ ತಕ್ಷಣ ಊರಿಗೆ ಬಂದು ನಿಮ್ಮನ್ನೆಲ್ಲ ಕಾಣುತ್ತೇನೆ. ದಯವಿಟ್ಟು ನನ್ನ ತಾಯಿ ಹಾಗೂ ಅಪ್ಪನಿಗೆ ನಾನು ಇಲ್ಲಿ ಚೆನ್ನಾಗಿದ್ದೀನಿ ಎಂಬ ವಿಷಯವನ್ನು ತಿಳಿಸಿ ಹಾಗೂ ಅಕ್ಕನನ್ನು ತುಂಬಾ ಕೇಳಿದೆ ಎಂದು ಸಹ ತಿಳಿಸಿ.
ಇಂತಿ ನಿಮ್ಮ ಪ್ರೀತಿಯ ಕುಮಾರ್
ಅನೌಪಚಾರಿಕ ಪತ್ರ ಕನ್ನಡದಲ್ಲಿ ಉದಾರಣೆ / Informal letter writing in Kannada example 2
10ನೇ ತರಗತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿ ಶಾಲೆಯಲ್ಲಿ ಅಗ್ರಸ್ಥಾನ ಗಳಿಸಿರುವ ನಿಮ್ಮ ಗೆಳೆಯನಿಗೆ ಅಭಿನಂದನೆ ಸಲ್ಲಿಸಿ ಪತ್ರ ಬರೆಯಿರಿ. Write a letter to your best friend who had taken highest marks in his class.
ಸುದೀಪ್,
ಗಾಂಧಿನಗರ
ಬೆಂಗಳೂರು 56006
ದಿನಾಂಕ: ಡಿಸೆಂಬರ್ 12, 2022
ಆತ್ಮೀಯ ಗೆಳೆಯ,
ಗೋಕುಲ್
ಗೆಳೆಯ ನೀನು ಶಾಲೆಯಲ್ಲಿ ಅಗ್ರಸ್ಥಾನ ಗಳಿಸಿದೆ ಎಂಬ ವಿಷಯ ನನಗೆ ತಿಳಿಯಿತು ತುಂಬಾ ಸಂತೋಷವಾಗಿದೆ ನನಗೆ ಹಾಗೂ ನಮ್ಮ ಮನೆಯವರಿಗೆ ಇಷ್ಟು ದಿನ ನೀನು ಕಷ್ಟಪಟ್ಟು ಓದಿದ್ದಕ್ಕೆ ಉತ್ತಮ ಫಲಿತಾಂಶ ಬಂದಿದೆ ನಿಮ್ಮ ಮನೆಯವರು ಸಹ ತುಂಬಾ ಸಂತೋಷದಲ್ಲಿದ್ದಾರೆ ನಿಮ್ಮ ತಂದೆ ಇವತ್ತು ಬೆಳಗ್ಗೆ ನನಗೆ ಈ ವಿಷಯ ತಿಳಿಸಿದರು ನಿನಗೆ ಸಿಕ್ಕಿರುವ ಮಾರ್ಕ್ಸ್ ವಿಷಯದ ಸುದ್ದಿ ಕೇಳಿದ ನಮ್ಮ ಮನೆಯವರು ಕೂಡ ತುಂಬಾ ಸಂತೋಷದಿಂದ ನನಗೆ ಹೃತ್ಪೂರ್ವಕ ಅಭಿನಂದನೆಗಳನ್ನು ನಿನಗೆ ತಿಳಿಸು ಎಂದು ಹೇಳಿದ್ದಾರೆ.
ಆದಷ್ಟು ಬೇಗ ನಿನ್ನನ್ನು ನಾನು ಕಾಣುತ್ತೇನೆ ತುಂಬು ಹೃದಯದ ಶುಭಾಶಯಗಳು.
ಪ್ರೀತಿಯ ಗೆಳೆಯ,
ಸುದೀಪ್
We have given a few formats of letter writing in Kannada in order to write letters when essential for you there are two types, formal letter writing in Kannada and informal letter writing in Kannada. Whenever letter writing is essential you just follow these two formats, we wish you good luck.