ಎಜಿ ಜಿನೋಟೈಪ್ ಒಳಗೊಂಡಿರುವ ಜನರಲ್ಲಿ ಮೀನಿನ ಎಣ್ಣೆ ತೆಗೆದುಕೊಂಡಿದ್ದರಿಂದ ಟ್ರೈಗ್ಲಿಸರೈಡ್ ಕ್ರಮೇಣ ಕಡಿಮೆಯಾಯಿತು ಅದೇ ರೀತಿ AG ಜಿನೋಟೈಪ್ ಹೊಂದಿರುವ ಜನರು ಮೀನಿನ ಎಣ್ಣೆಯನ್ನು ಸೇವಿಸುವುದರಿಂದ ಇವರಿಗೆ ಋಣಾತ್ಮಕ ಪರಿಣಾಮ ಆಯಿತು ಅಂದರೆ ಇವರಲ್ಲಿ ಟ್ರೈಗ್ಲಿಸರೈಡ್ ಕ್ರಮೇಣ ಹೆಚ್ಚುತ್ತಾ ಹೋಯಿತು ಇದರಿಂದ ತಿಳಿದು ಬಂದ ಮಾಹಿತಿ ಎಂದರೆ ಮೀನಿನ ಎಣ್ಣೆ ಸೇವನೆ ಎಲ್ಲರನ್ನು ಒಂದೇ ತರಹದ ಪರಿಣಾಮ ಬೀರುವುದಿಲ್ಲ ಎನ್ನುವುದು. ಮೀನಿನ ಎಣ್ಣೆ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎಂಬುದು ಸಾಬೀತಾಗಿದೆ. ಫಿಶ್ ಆಯಿಲ್ ಅನ್ನು ಮೀನುಗಳ ಟಿಶ್ಯೂ ಇಂದ ಶೇಖರಿಸಲಾಗುವುದು ಕೆಲವು ಸಂದರ್ಭಗಳಲ್ಲಿ ಮೀನುಗಳ ಲಿವರ್ ನಿಂದ ಕೂಡ ಮೀನಿನ ಎಣ್ಣೆಯನ್ನು ವರ ತೆಗೆಯಲಾಗುವುದು ಇದರ ಸೇವನೆಯಿಂದ ತುಂಬಾ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದಲ್ಲದೆ ಹಲವು ವಿಧದ ಕಾಯಿಲೆಗಳು ದೂರವಾಗುತ್ತವೆ ಅವುಗಳೆಂದರೆ,
- Fish oil ಸೇವನೆ ಕೊಲೆಸ್ಟ್ರಾಲ್ ಕಡಿಮೆ ಮಾಡುವುದರ ಜೊತೆಗೆ ನಿಮ್ಮ ಹೃದಯದ ಆರೋಗ್ಯ ಕಾಪಾಡುತ್ತದೆ.
- ಮೀನೆಣ್ಣೆ ಮಾನಸಿಕ ರೋಗಿಗಳ ಚಿಕಿತ್ಸೆಗೆ ತುಂಬಾ ಪ್ರಭಾವಶಾಲಿ.
- ಪ್ರತಿದಿನ ಮೀನೆಣ್ಣೆ ಸೇವಿಸುವುದರಿಂದ ನಿಮ್ಮ ದೇಹದ ತೂಕ ಕಡಿಮೆ ಗೊಳಿಸುತ್ತದೆ.
- ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ.
- ಚರ್ಮದ ಕಾಂತಿಯನ್ನು ವೃದ್ಧಿಸುತ್ತದೆ.
- Fish oil ಲಿವರ್ನಲ್ಲಿರುವ ಕೊಬ್ಬಿನಂಶವನ್ನು ಕಡಿಮೆ ಮಾಡುವುದರ ಜೊತೆಗೆ ಪ್ರಗ್ನೆಂಟ್ ಮಹಿಳೆಯರಿಗೆ ತುಂಬಾ ಸಹಕಾರಿ ಔಷಧ.
- ಮೀನಿನ ಎಣ್ಣೆ ಪ್ರತೀದಿನ ಸೇವನೆಯಿಂದ ಮಾನಸಿಕ ಒತ್ತಡ ಹಾಗೂ ಡಿಪ್ರೆಸನ್ ಅನ್ನು ಕಡಿಮೆ ಮಾಡುತ್ತದೆ.
- ಆಸ್ತಮ ರೋಗಿಗಳು Fish oil ಸೇವಿಸುವುದರಿಂದ ಅವರ ಅಸ್ತಮಾ ಕಾಯಿಲೆ ಅತಿವೇಗವಾಗಿ ಉಪಶಮನವಾಗುತ್ತದೆ.