ಹಾರ್ದಿಕ್ ಪಾಂಡ್ಯರನ್ನ ಅತ್ಯಂತ ಕ್ರೇಜಿ ಆಟಗಾರ ಎಂದು ಕರೆಯುತ್ತಾರೆ, ಕಾರಣ ಗೊತ್ತಾ

ಇಂಗ್ಲೆಂಡ್ನ ಸ್ಫೋಟಕ ಆಟಗಾರ ಹಾಗೂ ಆಲ್ರೌಂಡ್ Ben stokes ಎಂತಹ ಭಯಾನಕ ಬ್ಯಾಟ್ಸ್ಮನ್ ಎಂಬುದು ಈಗಾಗಲೇ ನಮಗೆ ಗೊತ್ತಾಗಿದೆ, ನ್ಯೂಜಿಲ್ಯಾಂಡ್ ವಿರುದ್ಧ ವರ್ಲ್ಡ್ ಕಪ್ ಫೈನಲ್ ನಲ್ಲಿ ಅತ್ಯದ್ಭುತ ಆಟ ಪ್ರದರ್ಶಿಸಿದ stokes ಇಂಗ್ಲೆಂಡ್ನ ಪಾಲಿಗೆ ಗೆಲುವನ್ನು ತಂದುಕೊಡುವಲ್ಲಿ ಯಶಸ್ವಿಯಾದರು ಹಾಗೂ ಭಾರತದ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಅತಿ ಆಕರ್ಷಕ 99 ರನ್ ಗಳಿಸಿ ಇಂಗ್ಲೆಂಡ್ ಗೆ ಸುಲಭ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರೂ ಅದೇ ರೀತಿ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ನ ಪಾಲಿಗೆ ಗೆಲುವಿನ ಆಟವನ್ನು ಪ್ರಾರಂಭಿಸಿದ ಸ್ಟೋಕ್ಸ್ ನಾ ಕ್ಯಾಚ್ ಚೆಲ್ಲಿ ಬಿಟ್ಟಿದ್ದ ಹಾರ್ದಿಕ್ ಪಾಂಡ್ಯ ತುಂಬಾ ಆತಂಕದಲ್ಲಿದ್ದರು ಕೇವಲ 30 ರನ್ ಗಳಿಸಿ ನಟರಾಜನ್ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ಟು ಔಟಾದ ಬೆನ್ ಸ್ಟೋಕ್ಸ್ ಅನ್ನು ನೋಡುತ್ತಲೇ ಹಾರ್ದಿಕ್ ಪಾಂಡ್ಯ ನಮಸ್ಕರಿಸಿ ವಿಚಿತ್ರ ರೀತಿಯಲ್ಲಿ ಗೆಲುವನ್ನು ಆಚರಿಸಿದರು ಇದೀಗ ಈ ವಿಡಿಯೋ ಹಾಗೂ ಇಮೇಜ್ ತುಂಬಾ ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಮೆಚ್ಚುಗೆಯನ್ನು ಪಡೆಯುತ್ತಿದೆ. ಬೆನ್ ಸ್ಟೋಕ್ಸ್ ಅತ್ಯಂತ ಭಯಾನಕ ಬ್ಯಾಟ್ಸ್ಮನ್ ಎಂಬುದು ಹಾರ್ದಿಕ್ಗೆ ಮೊದಲೇ ಗೊತ್ತಿತ್ತು ಹಾಗೂ ಮೂರನೇ ಪಂದ್ಯದಲ್ಲಿ ಅವರ ಕ್ಯಾಚನ್ನು ಚೆಲ್ಲಿದ್ದರಿಂದ ತುಂಬಾ ಆತಂಕದಲ್ಲಿದ್ದರು ಅಕಸ್ಮಾತಾಗಿ ನಾನು ಬಿಟ್ಟ catchನಿಂದ ಭಾರತ ಸೋತರೆ ನನ್ನ ಮೇಲೆ ಟೀಕಾಪ್ರಹಾರ ವೇ ನಡೆಯುತ್ತದೆ ಎಂಬ ಮಾಹಿತಿ ಮೊದಲೇ ಅರಿತಿದ್ದ ಹಾರ್ದಿಕ್ ಪಾಂಡ್ಯ ತುಂಬಾ ದುಃಖದಲ್ಲಿದ್ದರೂ ಕ್ಯಾಚ್ ಚೆಲ್ಲಿದ ಕೆಲವೇ runಗಳ ಬಳಿಕ ಔಟಾದ Stokesಅನ್ನು ಬೀಳ್ಕೊಡುತ್ತ ಅವರಿಗೆ ನಮಸ್ಕರಿಸಿದ್ದು ತುಂಬಾ ವಿಶೇಷವಾಗಿತ್ತು.

ಹಾರ್ದಿಕ್ ಪಾಂಡ್ಯ ಅತ್ಯಂತ ವಿನೂತನ ಅಸಾಮಾನ್ಯ ಆಟಗಾರ ಎಂಬುದು ನಮ್ಮ ನಿಮ್ಮೆಲ್ಲರಿಗೂ ಗೊತ್ತೇ ಇದೆ ಏಕೆಂದರೆ ಅವರು ಪ್ರತಿ ಮ್ಯಾಚು ನಲ್ಲೂ ವಿಧವಿಧದ ಹೇರ್ ಕಟಿಂಗ್ ಮಾಡಿಕೊಂಡು ಕಣಕ್ಕಿಳಿಯುತ್ತಾರೆ, ಅಲ್ಲದೆ ವಿಧವಿಧದ ಟ್ಯಾಟೋಗಳನ್ನು ತಮ್ಮ hand, body ಅಲ್ಲೆಲ್ಲಾ ತುಂಬಾ ವಿಚಿತ್ರವಾಗಿ ಹಾಕಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಾರೆ ಇನ್ನೂ ಕ್ರಿಕೆಟ್ನ ಹೊರಗಿನ ಪ್ರಪಂಚದಲ್ಲಿ ಅಂತೂ ಅವರ ಉಡುಗೆ-ತೊಡುಗೆಗಳು ತುಂಬಾ ವಿಚಿತ್ರ, ಪ್ರತಿದಿನ ವಿವಿಧ ಸ್ಟೈಲ್ ಗಳನ್ನು ಮಾಡುತ್ತ ಜನರನ್ನು ಆಕರ್ಷಿಸುತ್ತಿದ್ದಾರೆ ನಮ್ಮ ಹಾರ್ದಿಕ್ ಪಾಂಡ್ಯ. ಇವರು ಸ್ಟೈಲ್ ಅಲ್ಲ ಅಷ್ಟೇ ಅಲ್ಲ ಇತ್ತೀಚೆಗೆ ತಮ್ಮ ಗೆಳತಿಯನ್ನು ಪ್ರಗ್ನೆಂಟ್ ಮಾಡಿ ನಂತರ ಅವರನ್ನು ಮದುವೆಯಾದರು ಇದು ತುಂಬಾ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಟ್ರೋಲ್ ಕೂಡ ಆಗಿತ್ತು. ಇವರು ಮಾಡುವ ಯಾವುದೇ ಕೆಲಸ ಸಾಮಾನ್ಯವಾಗಿರುವುದಿಲ್ಲ ಅಸಾಮಾನ್ಯವಾಗಿ ಇರುತ್ತದೆ.
ಇತ್ತೀಚಿಗೆ ಇವರು ಭಾರತ ತಂಡದಲ್ಲಿ ತುಂಬಾ ಹೆಸರುವಾಸಿ ಗಳಿಸಿಕೊಂಡಿದ್ದಾರೆ ಕಾರಣ ಮಧ್ಯಮ ಕ್ರಮಾಂಕದಲ್ಲಿ ಆಟ ಆಡುವ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ನಲ್ಲಿ ತುಂಬಾ ಕಮಾಲ್ ಮಾಡಿ ಹಲವು ಪಂದ್ಯಗಳನ್ನು ಭಾರತಕ್ಕೆ ತಿಳಿಸಿಕೊಟ್ಟಿದ್ದಾರೆ ಅಷ್ಟೇ ಅಲ್ಲದೆ ಮಧ್ಯಮ ವೇಗಿಯಾಗಿರುವ ಹಾರ್ದಿಕ್ ಪಾಂಡ್ಯ ಉತ್ತಮ ಬೌಲಿಂಗ್ ಕೂಡ ಮಾಡುತ್ತಾರೆ ಹಾಗೂ ಹಲವು ವಿಕೆಟ್ಗಳನ್ನು ಸಹ ಪಡೆದಿದ್ದಾರೆ ಉತ್ತಮ ಎಕಾನಮಿ ಬೋಲಿಂಗ್ ಮಾಡುವ ಹಾರ್ದಿಕ್ ಪಾಂಡ್ಯ ಇತ್ತೀಚಿಗೆ ಭಾರತದ ಪಾಲಿಗೆ ಉತ್ತಮ ಆಲ್-ರೌಂಡರ್ ಎನಿಸಿಕೊಂಡಿದ್ದಾರೆ.

ಭಾರತದ ಕಡೆ ದೋನಿ ಉತ್ತಮ ಫಿನಿಶರ್ ಎಂಬ ಪಟ್ಟವನ್ನು ಪಡೆದಿದ್ದರು, ಹಲವು ಪಂದ್ಯಗಳನ್ನು ಭಾರತ ಗೆಲ್ಲುವಂತೆ ಮಾಡಿದ್ದ ಧೋನಿ ನಂತರ ಇದೀಗ ಹಾರ್ದಿಕ್ ಪಾಂಡ್ಯ ಅವರ ಸ್ಥಾನವನ್ನು ತುಂಬುತ್ತಿದ್ದಾರೆ ಹಲವು ಮ್ಯಾಚುಗಳನ್ನು ರೋಚಕವಾಗಿ ಗೆಲ್ಲಿಸಿ ಕೊಟ್ಟಿರುವ ಹಾರ್ದಿಕ್ ಪಾಂಡ್ಯ ತುಂಬಾ ಅಪಾಯಕಾರಿ ಬ್ಯಾಟ್ಸ್ಮನ್. ಇವರು ತಮ್ಮ carrierನ್ನು ಐಪಿಎಲ್ ಮುಖಾಂತರ ಆರಂಭಿಸಿದರು, ಮುಂಬೈನ ಪರವಾಗಿ ಆಡುವ ಇವರು ಚಿನ್ನದ ಮೊಟ್ಟೆ ಇದ್ದಂತೆ ಏಕೆಂದರೆ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಅತ್ಯಂತ ಪ್ರಭಾವಶಾಲಿ ಆಗಿದ್ದಾರೆ ಹಲವು ಸೋಲುವ ಮ್ಯಾಚ್ ಗಳನ್ನು ತಾವೊಬ್ಬರೇ ನಿಂತು ಬ್ಯಾಟಿಂಗ್ನಲ್ಲಿ ಕಮಲ್ ಮಾಡಿ ಜಯಗಳಿಸುವಂತೆ ಕೂಡ ಮಾಡಿದ್ದಾರೆ. ಈತ 6 ಹೊಡೆಯುವುದನ್ನು ನೋಡುತ್ತಿದ್ದರೆ ಎಷ್ಟು ಸುಲಭವಾಗಿದೆ ಎಂದೆನಿಸುತ್ತದೆ, ಹಲವು ಕಾಮೆಂಟೇಟರ್ ಗಳು ಇವರ ಬ್ಯಾಟಿಂಗ್ ಶೈಲಿಯನ್ನು ಗಮನಿಸಿ ಡಿವಿಲಿಯರ್ಸ್ ನಂತೆ ಬ್ಯಾಟಿಂಗ್ ಆಡುತ್ತಾರೆ ಎಂದು ವಿವರಿಸಿದ್ದಾರೆ, ಡಿವಿಲಿಯರ್ಸ್ ತ್ರಿ ಸಿಕ್ಸ್ಟಿ ಡಿಗ್ರಿ ಆಟಗಾರ ಇವರಂತೆ ಹಾರ್ದಿಕ್ ಪಾಂಡ್ಯ ಕೂಡ 360 ಬೌಂಡರಿ ಅಲ್ಲೆಲ್ಲ ರನ್ಗಳನ್ನು ಗಳಿಸುತ್ತಾರೆ. ಅಂತಿಮ ಐದು ಓವರ್ಗಳಲ್ಲಿ ಇವರ ಸ್ಟ್ರೈಕ್ ರೇಟ್ 200ಕ್ಕಿಂತ ಹೆಚ್ಚು ಇರುತ್ತದೆ ಅದೇ ಇವರ ವಿಶೇಷತೆ.