ಯಾವ ನಕ್ಷತ್ರದವರು ಯಾವ ನಕ್ಷತ್ರದವರ ಜೊತೆ ಮದುವೆ ಆದರೆ ಒಳ್ಳೇದು - 27 ನಕ್ಷತ್ರಗಳ ಹೆಸರು

ಯಾವ ನಕ್ಷತ್ರದವರು ಯಾವ ನಕ್ಷತ್ರದವರ ಜೊತೆ ಮದುವೆ ಆದರೆ ಒಳ್ಳೇದು? ನಕ್ಷತ್ರ ಮತ್ತು ರಾಶಿಯನ್ನ ನಮ್ಮ ದೇಶದಲ್ಲಿ ಮಗು ಹುಟ್ಟಿದ ದಿನವೇ ಪುರೋಹಿತರ ಕೈಯಲ್ಲಿ ಜನ್ಮ ಕುಂಡಲಿಯನ್ನ ತೆಗೆದುಕೊಳ್ಳುತ್ತಾರೆ, ಏಕೆಂದರೆ ನಮಗೆ ಗೊತ್ತಿರುವ ಹಾಗೆ 27 ನಕ್ಷತ್ರಗಳ ಹೆಸರು ತಿಳಿದಿದೆ ಅದರಲ್ಲಿ ನಮ್ಮ ಮಗುವಿನ ನಕ್ಷತ್ರ ಯಾವುದಾಗಿದೆ ಹೇಗೆಲ್ಲಾ ಮುಂದೆ ಜೀವನದಲ್ಲಿ ತಮ್ಮ ಮಗು ಬೆಳವಣಿಗೆಯನ್ನು ಕಾಣುತ್ತದೆ ಹೇಗೆಲ್ಲ ನಕ್ಷತ್ರಗಳು ಪರಿಣಾಮವನ್ನು ಬೀರುತ್ತವೆ ಎಂಬುದನ್ನ ತಿಳಿದುಕೊಳ್ಳುವ ಉದ್ದೇಶದಿಂದ ಭಾರತೀಯ ಪೋಷಕರು ಜಾತಕವನ್ನು ಹುಟ್ಟಿದ ದಿನವೇ ತೆಗೆದುಕೊಳ್ಳುತ್ತಾರೆ.
ಬಹು ಮುಖ್ಯವಾಗಿ ಹುಟ್ಟಿದ ಸಮಯ ಹಾಗೂ ದಿನವನ್ನ ಇಟ್ಟುಕೊಂಡು ಪಂಚಾಂಗವನ್ನು ನೋಡಿ ನಕ್ಷತ್ರ ಹಾಗೂ ರಾಶಿಯನ್ನು ಪುರೋಹಿತರು ತಿಳಿಸುತ್ತಾರೆ ನಮ್ಮ ಪೂರ್ವಜರು ನಕ್ಷತ್ರಗಳನ್ನ ಬಹಳ ಸುಲಭವಾಗಿ ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಕೆಲವೊಂದು ನಕ್ಷತ್ರಗಳಿಗೆ ಒಂದು ಪ್ರಾಣಿಯ ರೂಪವನ್ನು ನೀಡಿದ್ದಾರೆ ಹಾಗಾಗಿ ಯಾವ ನಕ್ಷತ್ರದಲ್ಲಿ ಹುಟ್ಟಿರುವವರು ಯಾವ ಪ್ರಾಣಿಯ ಹಾಗೆ ಕೆಲವು ಗುಣಗಳನ್ನು ಹೊಂದಿರುತ್ತಾರೆ ಎಂಬುದನ್ನು ನಾವು ಗಮನಿಸಬಹುದು ಕೆಲವು ಜನರ ಹಾವಾ ಭಾವಗಳು ಕೆಲವು ಪ್ರಾಣಿಯನ್ನು ಹೋಲುತ್ತವೆ ಅದು ನಮಗೆಲ್ಲ ಗೊತ್ತಿರುವ ವಿಚಾರವೇ. ಇನ್ನೂ ದೊಡ್ಡವರಾದ ಮೇಲೆ ಜಾತಕವನ್ನು ಹಲವು ಜನರು ನೋಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಮದುವೆಯ ಸಂದರ್ಭದಲ್ಲಿ ಹುಡುಗಿಯ ಜಾತಕ ಹಾಗೂ ಹುಡುಗನ ಜಾತಕವನ್ನು ಸಹ ನೋಡಿ ಮದುವೆಯನ್ನು ಮಾಡುತ್ತಾರೆ ಇದಕ್ಕೆ ಮುಖ್ಯ ಕಾರಣ ಮುಂದೆ ಜೀವನದಲ್ಲಿ ಇವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು, ಜೀವನವನ್ನ ಸುಲಭವಾಗಿ ನಡೆಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ ನಕ್ಷತ್ರವನ್ನ ನೋಡಿ ಮದುವೆಯನ್ನ ತೀರ್ಮಾನಿಸುತ್ತಾರೆ.
ನಾವು ಈ ಕೆಳಗೆ ಯಾವ ನಕ್ಷತ್ರದವರು ಮದುವೆ ಮಾಡಿಕೊಳ್ಳಬಹುದು ಇನ್ನೂ ಯಾವ ನಕ್ಷತ್ರಗಳು ಗಂಡು-ಹೆಣ್ಣು ಮದುವೆ ಆಗಬಾರದು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ನೀಡಿದ್ದೇವೆ ಖಂಡಿತ ನೀವು ಸಹ ಇದನ್ನ ಓದಿ ತಿಳಿದುಕೊಳ್ಳಬಹುದಾಗಿದೆ.

27 ನಕ್ಷತ್ರಗಳ ಹೆಸರು
ಅಷ್ವಿನಿ ನಕ್ಷತ್ರ - ಕೇತು - ಗಂಡು ಕುದುರೆ
ಉತ್ತರಭಾದ್ರಪದ - ಶನಿ - ಹಸು
ಭರಣಿ ನಕ್ಷತ್ರ - ಶುಕ್ರ - ಗಂಡು ಆನೆ
ಸ್ವಾತಿ - ರಾಹು - ಎಮ್ಮೆ
ಕೃತಿಕಾ ನಕ್ಷತ್ರ - ಸೂರ್ಯ - ಹೆಣ್ಣು ಮೇಕೆ
ಹಸ್ತ - ಚಂದ್ರ - ಎಮ್ಮೆ
ರೋಹಿಣಿ - ಚಂದ್ರ - ಸರ್ಪ
ಪೂರ್ವಫಾಲ್ಗುಣಿ - ಶುಕ್ರ - ಇಲಿ
ಮೃಗಶಿರ - ಕುಜ - ಸರ್ಪ
ಆಶ್ಲೇಷ - ಬುಧ - ಬೆಕ್ಕು
ಅರಿದ್ರ - ರಾಹು - ನಾಯಿ
ಪುಷ್ಯ - ಶನಿ - ಗಂಡು - ಮೇಕೆ
ಪುನರ್ವಸು - ಗುರು - ಬೆಕ್ಕು
ಮಘಾ - ಕೇತು - ಇಲಿ
ಉತ್ತರಫಾಲ್ಗುಣಿ - ಸೂರ್ಯ - ಗೂಳಿ
ಚಿತ್ರ - ಕುಜ - ಹುಲಿ
ಧನಿಷ್ಠ - ಕುಜ - ಹೆಣ್ಣು ಸಿಂಹ
ವಿಶಾಖ - ಗುರು - ಹುಲಿ
ಪೂರ್ವಭಾದ್ರಪದ - ಗುರು - ಗಂಡು ಸಿಂಹ
ಅನುರಾಧ - ಶನಿ - ಜಿಂಕೆ
ರೇವತಿ - ಬುಧ - ಹೆಣ್ಣು ಆನೆ
ಜ್ಯೇಷ್ಠ - ಬುಧ - ಜಿಂಕೆ
ಮೂಲ - ಕೇತು - ನಾಯಿ
ಪೂರ್ವಾಷಾಡ - ಶುಕ್ರ - ಕೋತಿ
ಉತ್ತರಾಷಾಡ - ಸೂರ್ಯ - ಮುಂಗುಸಿ
ಶ್ರವಣ - ಚಂದ್ರ - ಕೋತಿ
ಶತಭಿಷ - ರಾಹು - ಹೆಣ್ಣು ಕುದುರೆ

ಈ ಕೆಳಗೆ ಯಾವೆಲ್ಲ ನಕ್ಷತ್ರಗಳು ಯಾವ ಪ್ರಾಣಿಯ ಹೆಸರನ್ನು ಹಿಡಿದು ಕರೆಯುತ್ತೇವೆ ಎಂಬುದನ್ನು ತಿಳಿದುಕೊಳ್ಳಿ
ನಮಗೆಲ್ಲ ಗೊತ್ತಿದೆ ಕೆಲವು ಪ್ರಾಣಿಗಳು ಒಂದಕ್ಕೊಂದು ದ್ವೇಷ ನಡೆಸುತ್ತವೆ ಅದೇ ರೀತಿ ನಮ್ಮ ಪೂರ್ವಜರು ನಮ್ಮ ರಾಶಿಯಲ್ಲಿ ಕೆಲವು ರಾಶಿಯವರು ಮದುವೆ ಆಗಬಾರದು, ಈ ರೀತಿ ಮದುವೆಯಾದವರು ಒಬ್ಬರಿಗೊಬ್ಬರು ಕಿತ್ತಾಡಿಕೊಳ್ಳುತ್ತಾರೆ ಹಾಗೂ ಜೀವನದಲ್ಲಿ ತುಂಬಾ ನೋವನ್ನ ಪಡೆಯುತ್ತಾರೆ ಈ ಕಾರಣದಿಂದಾಗಿಯೇ ಕೆಲವು ನಕ್ಷತ್ರದವರು ಮದುವೆಯಾಗಬಾರದು ಎಂಬುದನ್ನು ತಿಳಿದು ಕೆಲವು ಮಾಹಿತಿಯನ್ನು ನಮಗೆ ನೀಡಿದ್ದಾರೆ ಈಗ ನಾವು ಅದನ್ನ ಅನುಸರಿಸಿಕೊಂಡು ಹೋಗಬೇಕಾದದ್ದು ಕರ್ತವ್ಯವಾಗಿದೆ. ಕೆಲವು ಪ್ರಾಣಿಗಳು ಉದಾಹರಣೆಗೆ ಹಸು ಸಿಂಹ, ಹುಲಿ ಕುರಿ, ಹಾವು ಗರುಡ ಈ ರೀತಿಯ ಕೆಲವು ಪ್ರಾಣಿಗಳಿಗೆ ಒಂದನ್ನು ಇನ್ನೊಂದು ಕಂಡರೆ ಆಗುವುದಿಲ್ಲ ಯಾವಾಗಲೂ ಕಿತ್ತಾಟ ನಡೆಸುತ್ತಿರುತ್ತವೆ ಹಾಗಾಗಿ ಕೆಲವು ರಾಶಿಯವರು ಗಂಡು ಹೆಣ್ಣು ಒಟ್ಟಿಗೆ ಜೀವನ ನಡೆಸಲು ಆಗೋದಿಲ್ಲ ಈ ಕಾರಣದಿಂದಾಗಿಯೇ ಇವರು ಮದುವೆಯಾಗಬಾರದು ಅಕಸ್ಮಾತ್ ಏನಾದರೂ ವಿರುದ್ಧವಾಗಿ ನಡೆದುಕೊಂಡು ಮದುವೆಯಾದರೆ ಜೀವನ ಜಗಳದಿಂದ ಕೂಡಿರುತ್ತೆ ಮುಂದೆ ಡೈವರ್ಸ್ ಕೂಡ ಆಗಬಹುದು ಈ ಕಾರಣದಿಂದಾಗಿಯೇ ನಾವು ಈ ಕೆಳಗೆ ಯಾವ ಪ್ರಾಣಿ ಹೊಂದಿರುವವರು ಮದುವೆ ಆಗಬಾರದು ಎಂಬುದನ್ನು ತಿಳಿಸಿಕೊಟ್ಟಿದ್ದೇವೆ ಖಂಡಿತ ನೀವು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಇಲ್ಲ ಹೋದರೆ ತುಂಬಾ ತೊಂದರೆಗೆ ಈಡಾಗುತ್ತೀರಾ.
ಹಸು - ಹುಲಿ
ನಾಯಿ - ಬೆಕ್ಕು
ಬೆಕ್ಕು - ಇಲಿ
ಹಾವು- ಮುಂಗುಸಿ
ಕುದುರೆ - ಎಮ್ಮೆ
ಆನೆ - ಸಿಂಹ
ಕೋತಿ - ಮೇಕೆ.