Best Niches for New Blogging in Kannada

ನೀವು Blogging in Kannada ದಲ್ಲಿ ದುಡ್ಡು ಮಾಡುವ ಆಲೋಚನೆಯಲ್ಲಿದ್ದರೆ ಖಂಡಿತವಾಗಿಯೂ ಸಾಧ್ಯ ಇದೆ ಏಕೆಂದರೆ ಈಗಾಗಲೇ ಹಲವು ಜನರು ತಮ್ಮದೇ ಆದ ಆಸಕ್ತಿಯ ವಿಚಾರದಲ್ಲಿ articles ಬರೆಯುತ್ತಾ ಇದ್ದಾರೆ, ನೀವು ಊಹಿಸಲು ಸಹ ಸಾಧ್ಯವಿಲ್ಲ ಅಷ್ಟೊಂದು ಹಣ ಕೂಡ ಗಳಿಸುತ್ತಿದ್ದಾರೆ ಉದಾಹರಣೆಗೆ ನೀವು ಗಮನಿಸಿರಬಹುದು ಟಿವಿ9 ಪಬ್ಲಿಕ್ ಟಿವಿ ಸುವರ್ಣ ನ್ಯೂಸ್ ಇವರೆಲ್ಲ ಒಂದು ವೆಬ್ ಸೈಟನ್ನು ಹೊಂದಿದ್ದಾರೆ ಪ್ರತಿದಿನ ಹಾಕುತ್ತಾರೆ ಇದರ ಮೂಲ ಉದ್ದೇಶ ಏನೆಂದರೆ, ಹಣ ಗಳಿಕೆ ಮಾಡುವುದು. ನೀವು ನಂಬುತ್ತಿರೋ ಇಲ್ಲವೋ ನಿಮಗೆ ಬಿಟ್ಟಿದ್ದು ಪ್ರತಿದಿನ ಲಕ್ಷಗಟ್ಟಲೆ ಹಣ ಈ ಚಾನೆಲ್ ಗಳು ಸಂಪಾದಿಸುತ್ತಿವೆ ಕೇವಲ ಒಂದೇ ವೆಬ್ಸೈಟ್ ನಿಂದ. ಇನ್ನೇಕೆ ತಡ ನೀವು ಕೂಡ ಒಂದು ವೆಬ್ ಸೈಟನ್ನು ಪ್ರಾರಂಭಿಸಿ ಕೇವಲ ಎರಡು ತಿಂಗಳಲ್ಲಿ ಹಣ ಗಳಿಕೆ ಮಾಡಲು ಶುರು ಮಾಡಿ.
ನೀವು ಬ್ಲಾಕ್ ಗಳನ್ನು ಬರೆಯಲು ಯೋಚನೆ ಮಾಡುತ್ತಿದ್ದಾರೆ ಮೊದಲನೇ ಹಂತ ನಿಮ್ಮ ನೆಚ್ಚಿನ ವಿಷಯದಲ್ಲಿ Kannada Blogging ಬರೆಯುತ್ತಾ ಹೋಗಬೇಕು ಏಕೆಂದರೆ ಆಸಕ್ತಿ ಇಲ್ಲದ ವಿಷಯವನ್ನು ತೆಗೆದುಕೊಂಡು ಆರ್ಟಿಕಲ್ಸ್ ಗಳನ್ನು ಅತಿ ಹೆಚ್ಚು ದಿನಗಳ ವರೆಗೆ ಬರೆಯುವುದು ಖಂಡಿತ ಸಾಧ್ಯವಿಲ್ಲ.
ಸ್ವಲ್ಪ ದಿನ ನೀವು ಬರೆಯುತ್ತೀರಿ ತದನಂತರ ಬೇಜಾರಾಗಿ ಯಾವುದೇ ಆರ್ಟಿಕಲ್ಸ್ ಗಳನ್ನು ಬರೆಯದೆ ನಿಲ್ಲಿಸಿ ಬಿಡುತ್ತೀರಿ ನೀವು ನಿಮ್ಮ Kannada Blogging ನಿಂದ ಹಣವನ್ನು ಗಳಿಸಬೇಕು ಅಂತ ಅಂದುಕೊಂಡಿದ್ದರೆ ಪ್ರತಿ ವಾರ ಕೂಡ ನೀವು ಆರ್ಟಿಕಲ್ಸ್ ಅನ್ನು ಬರೆಯಲೇಬೇಕು ಆಗಿದ್ದಾಗ ಮಾತ್ರ ಹಣ ಗಳಿಕೆ ಮಾಡುವುದು ಸಾಧ್ಯ.
ಕೆಲವರಿಗೆ ಪ್ರಯಾಣ, ಅಡಿಗೆ ಮಾಡುವುದು, ಹಿಸ್ಟರಿ ತಿಳಿದುಕೊಳ್ಳುವುದು, ಬ್ಯೂಟಿ ಟಿಪ್ಸ್, ಆಟೋಮೊಬೈಲ್ಸ್ ಗಳ ಬಗ್ಗೆ ಅತಿ ಹೆಚ್ಚಾಗಿ ತಿಳಿದುಕೊಳ್ಳಬೇಕು ಎಂಬ ಹುಡುಕಾಟದಲ್ಲಿ ಇರುತ್ತಾರೆ ಇಂಥ ಸಂದರ್ಭದಲ್ಲಿ ನೀವು ಒಂದು ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿ ಅದರದೇಂಟ್ಗಳನ್ನು ಪ್ರತಿನಿತ್ಯ ತುಂಬಿಸುತ್ತಾ ಹೋದರೆ ಗೂಗಲ್ ಇಂದ ಹಣ ಸಿಗುತ್ತದೆ ಇದರ ಜೊತೆಗೆ ವೆಬ್ಸೈಟ್ನ ಲ್ಲೂ ಆರ್ಟಿಕಲ್ಸ್ ಗಳನ್ನು ಬರೆಯುತ್ತಾ ಇದ್ದರೆ ಇನ್ನಷ್ಟು ಹಣ ನಿಮಗೆ ದೊರಕುತ್ತದೆ.

ಅಡುಗೆ ಚಾನೆಲ್
ಗೃಹಿಣಿಯರಿಗೆ ಮನೆಯಲ್ಲಿ ಮಾಡುವ ಕೆಲಸ ಸಿಕ್ಕರೆ ತುಂಬಾ ಚೆನ್ನಾಗಿರುತ್ತದೆ ಏಕೆಂದರೆ ಯಾವುದೇ ಅವಶ್ಯಕತೆ ಇರುವುದಿಲ್ಲ ಹೊರಗಡೆ ಹೋಗುವುದು ತಮಗೆ ಇಷ್ಟ ಬಂದ ಸಮಯದಲ್ಲಿ ಅಡುಗೆ ವಿಡಿಯೋಗಳನ್ನು ಮಾಡಿ ಯೂಟ್ಯೂಬ್ ನಲ್ಲಿ ಹಾಕಿ ಜೊತೆಗೆ ವೆಬ್ಸೈಟ್ನಲ್ಲೂ ಸಹ ಅದರ ಬಗ್ಗೆ ಸವಿಸ್ತಾರ ಮಾಹಿತಿಯನ್ನು ಹಾಕಿಕೊಂಡು ಹೋಗುತ್ತಿದ್ದರೆ ಕೈ ತುಂಬಾ ಹಣ ಸಿಗುವುದರ ಜೊತೆಗೆ ಸಾಕಷ್ಟು ಜನರಿಗೆ ಅನುಕೂಲ ಸಹ ಆಗುತ್ತದೆ. ಸಿಟಿಯಲ್ಲಿ ವಾಸವಿರುವ ಜನರು ಅಡುಗೆಯನ್ನು ಕಲಿತಿರುವುದಿಲ್ಲ ಕೆಲವೊಮ್ಮೆ ಮನೆಯಲ್ಲಿ ಯಾರು ಇಲ್ಲದೆ ಇರುವಾಗ ಗಂಡಸರು ತಾವೇ ಅಡುಗೆ ಮಾಡಿ ತಿನ್ನಬೇಕಾದ ಪರಿಸ್ಥಿತಿ ಬರುತ್ತದೆ ಅಂತಹ ಸಂದರ್ಭದಲ್ಲಿ ಆನ್ಲೈನ್ ಗೆ ಹೋಗಿ ಹುಡುಕಾಟ ನಡೆಸುತ್ತಾರೆ. ನೀವು ನೀಡಿರುವ ಮಾಹಿತಿ ಅವರಿಗೆ ಇಷ್ಟವಾದರೆ ಖಂಡಿತ ನಿಮ್ಮ ಫ್ಯಾನ್ ಆಗುವುದರ ಜೊತೆಗೆ ಪ್ರತಿದಿನ ನಿಮ್ಮ ಆರ್ಟಿಕಲ್ಸ್ ಅನ್ನು ಓದುತ್ತಲೇ ಇರುತ್ತಾರೆ.

ಬ್ಯೂಟಿ ಟಿಪ್ಸ್ Blog in Kannada
ಮಹಿಳೆಯರಿಗೆ ತುಂಬಾ ಆಸಕ್ತಿದಾಯಕವಾದ ವಿಷಯ ಬ್ಯೂಟಿ ಪ್ರತಿದಿನ ಮೇಕಪ್ ಮಾಡದೇ ಕೆಲವು ಹೆಂಗಸರು ಮನೆ ಬಿಟ್ಟು ಹೊರಗೆ ನಡೆಯುವುದೇ ಇಲ್ಲ ತಮ್ಮ ಬಿಡುವಿನ ವೇಳೆಯಲ್ಲಿ ಹೇಗೆ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕು ಹೇಗೆಂದ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಸುಂದರವಾಗಿ ಕಾಣ ಬೇಕು ಎಂಬ ಹುಡುಕಾಟದಲ್ಲೇ ಇರುತ್ತಾರೆ ಇಂತಹ ಸಂದರ್ಭದಲ್ಲಿ ನೀವು ನಿಮ್ಮ ವೆಬ್ಸೈಟ್ನಲ್ಲಿ ಇದರ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡುತ್ತಿದ್ದರೆ ಖಂಡಿತ ಹೆಚ್ಚು ಜನರಿಗೆ ಉಪಯೋಗವಾಗುವುದಲ್ಲದೆ ನೀವು ಜನಮನ್ನಣೆ ಸಹ ಪಡೆದುಕೊಳ್ಳಬಹುದು.

Kannada Blogging ನ್ಯೂಸ್ ವೆಬ್ ಸೈಟ್
ನೀವು ಗಮನಿಸಿರಬಹುದು ಟಿವಿ9 ಪಬ್ಲಿಕ್ ಟಿವಿ ಸುವರ್ಣ ನ್ಯೂಸ್ ಎಲ್ಲರೂ ಕೂಡ ತಮ್ಮದೇ ಆದ ವೆಬ್ಸೈಟ್ ಹೊಂದಿದ್ದಾರೆ ಪ್ರತಿದಿನ ಅದರಲ್ಲಿ ಕಂಟೆಂಟ್ ಗಳನ್ನು ಹಾಕುತ್ತಾರೆ ಜನರು ಸಹ ಅಲ್ಲಿಗೆ ಹೋಗಿ ಓದುತ್ತಾರೆ ಇದಕ್ಕೆಲ್ಲ ಕಾರಣ ಏನು ಅಂತ ನಿಮಗೆ ಗೊತ್ತಾದರೆ ಖಂಡಿತ ಶಾಕ್ ಆಗುತ್ತೀರಾ ಹಣ ಗಳಿಕೆ ಮಾಡುವುದು ಹೌದು ಪ್ರತಿದಿನ ನ್ಯೂಸ್ ಚಾನೆಲ್ ಅವರು ಸಾಕಷ್ಟು ಹಣ ಮಾಡುತ್ತಾರೆ ಈ ರೀತಿ ಮಾಡಿ ನೀವು ಗಮನಿಸಿರಬಹುದು ಫೇಸ್ಬುಕ್ ನಲ್ಲಿ ತಮ್ಮದೇ ಆದ ನ್ಯೂಸ್ ಗಳನ್ನು ಪ್ರತಿನಿತ್ಯ ರಿಲೀಸ್ ಮಾಡುತ್ತಾರೆ ಈ ರೀತಿ ಮಾಡುವುದರಿಂದ ಇವರಿಗೆ ಗೂಗಲ್ ಅಥವಾ ಅಫೀಲಿಯಟ್ ಮಾರ್ಕೆಟಿಂಗ್ ಲಿಂಕ್ ಗಳನ್ನು ತಮ್ಮ ವೆಬ್ಸೈಟ್ನಲ್ಲಿ ಹಾಕಿದ್ದುದರಿಂದ ಅತಿ ಹೆಚ್ಚು ಹಣ ಇವರಿಗೆ ಸಿಗುತ್ತದೆ.
ಇದೇ ರೀತಿ ನೀವು ಸಹ ಟಿವಿಯಲ್ಲಿ ನ್ಯೂಸ್ ಗಳನ್ನು ನೋಡಿ ಅದರ ಬಗ್ಗೆ ಆರ್ಟಿಕಳನ್ನ ಬರೆದು ತಮ್ಮದೇ ವೆಬ್ಸೈಟ್ನಲ್ಲಿ ಹಾಕಬಹುದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದರ ಮುಖಾಂತರ ಅತಿ ಹೆಚ್ಚು ವಿಜಿಟರ್ಸ್ ಹೊಂದಬಹುದು ಜೊತೆಗೆ ಹಣ ಕೂಡ ನಿಮಗೆ ಸಿಗಲಿದೆ.

ಮೂವೀಸ್
ಇತ್ತೀಚಿನ ದಿನಗಳಲ್ಲಿ ಪ್ರತಿವಾರ ಹಲವು ಸಿನಿಮಾಗಳು ತೆರೆ ಕಾಣುತ್ತಿವೆ ಇದರ ಬಗ್ಗೆ blogger in kannada ದಲ್ಲಿ ರಿವ್ಯೂಸ್ ಗಳನ್ನು ಸಹ ನೀವು ವೆಬ್ಸೈಟ್ನಲ್ಲಿ ಹಾಕಿಕೊಂಡು ಬರುತ್ತಿದ್ದರೆ ಜನಮನ್ನಣೆ ಗಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ನಿಮಗೆ ಗೊತ್ತಿಲ್ಲದ ವಿಷಯ ಇದೆ ಅದುವೇ ಕೆಜಿಎಫ್ ಟೂನಂತಹ ಸಿನಿಮಾಗಳು ರಿಲೀಸ್ ಆದಾಗ ಸಾಕಷ್ಟು ಜನರು ಆನ್ಲೈನ್ ನಲ್ಲಿ ಸಿನಿಮಾವನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲಲ್ಲಿ ನೋಡಬೇಕು ಅಥವಾ ರಿವ್ಯೂಸ್ ನೋಡಿ ಸಿನಿಮಾವನ್ನು ಥೇಟರ್ ಗೆ ಹೋಗಿ ನೋಡಬೇಕು ಅಂದುಕೊಳ್ಳುತ್ತಾರೆ ನೀವು ಸಿನಿಮಾದ ಬಗ್ಗೆ ರಿವೀವ್ಸ್ ಗಳನ್ನು ಹಾಕಿದ್ದರೆ ಖಂಡಿತ ಅತಿ ಹೆಚ್ಚು ಜನರು ನಿಮ್ಮ ವೆಬ್ಸೈಟ್ನನ್ನು ನೋಡುವುದರಲ್ಲಿ ಯಾವುದೇ ಸಂಶಯ ಬೇಡ. ಪ್ರತಿ ಸಿನಿಮಾ ಟ್ರೈಲರ್ ರಿಲೀಸ್ ಆದಾಗ ಕೂಡ ನೀವು ಅದರ ಬಗ್ಗೆ ವಿಶ್ಲೇಷಣೆಯನ್ನು ಸವಿಸ್ತಾರವಾಗಿ ಬರೆಯಬಹುದು.

ಟೆಕ್ನಿಕಲ್ ಬ್ಲಾಗಿಂಗ್
ಅತಿ ಹೆಚ್ಚು ಜನರು ಇದನ್ನೇ ಮಾಡುತ್ತಿರುವುದು ಏಕೆಂದರೆ ಕೆಲವೊಮ್ಮೆ ಕೆಲವೊಬ್ಬರಿಗೆ ಹೇಗೆ ಜಿಮೇಲ್ ಅಕೌಂಟ್ ಅನ್ನು ಓಪನ್ ಮಾಡಬೇಕು ಹೇಗೆ ಇನ್ಬಾಕ್ಸ್ ನಲ್ಲಿ ಬಂದಂತಹ ಮೆಸೇಜ್ ಗಳನ್ನು ಓದಬೇಕು ಆಪ್ಸ್ ಗಳನ್ನು ಹೇಗೆ ಡೌನ್ ಲೋಡ್ ಮಾಡಿಕೊಳ್ಳಬೇಕೋ ತಮ್ಮ ಮೊಬೈಲ್ ನಲ್ಲಿ ಹೀಗೆಲ್ಲಾ ಗೂಗಲ್ ಸರ್ಚ್ ನಲ್ಲಿ ಜನರು ಹುಡುಕಾಟ ನಡೆಸುತ್ತಿರುತ್ತಾರೆ ಹಿತ ಸಂದರ್ಭದಲ್ಲಿ ನೀವೇನಾದರೂ ಇದರ ಬಗ್ಗೆ ಸವಿಸ್ತಾರವಾದ ಮಾಹಿತಿ ಜೊತೆಗೆ ವಿವರಗಳನ್ನು ತಮ್ಮ ವಿಜಿಟರ್ಸ್ ಗೆ ನೀಡಿದರೆ ಅನುಕೂಲವಾಗುವುದರ ಜೊತೆಗೆ ನೀವು ಕುಬೇರರಾಗಬಹುದು. ನಿಮಗೆ ಗೊತ್ತಿಲ್ಲದ ವಿಷಯ ಏನೆಂದರೆ ಇದೇ ರೀತಿ ಬ್ಲಾಗಿಂಗ್ ಮಾಡಿ ಹಲವಾರು ಜನರು ಕೋಟ್ಯಾಧೀಶರಾಗಿದ್ದಾರೆ ಪ್ರತಿನಿತ್ಯ ನೀವು ಮಾಡಬೇಕಾದ ಒಂದೇ ಒಂದು ಕೆಲಸ ಎಂದರೆ ಪ್ರತಿ ದಿನ ಒಂದು ಬ್ಲಾಕ್ ಬರೆಯಬೇಕು ಅದನ್ನು ತಮ್ಮ ವೆಬ್ಸೈಟ್ನಲ್ಲಿ ಪಬ್ಲಿಶ್ ಮಾಡಬೇಕು ಹೀಗೆ ಮಾಡುತ್ತಾ ಹೋದರೆ ಸಾಕಷ್ಟು ಜನರು ನಿಮ್ಮ ಆರ್ಟಿಕಲ್ಸ್ಗಳನ್ನ ಓದುವುದರಲ್ಲಿ ಯಾವುದೇ ಸಂಶಯವಿಲ್ಲ.

ಅಫೀಲಿಯೆಟ್ ಮಾರ್ಕೆಟಿಂಗ್
ಹೀಗೆಂದರೆ ಏನು ಎಂಬುದೇ ಕೆಲವು ಜನರಿಗೆ ಗೊತ್ತೇ ಇಲ್ಲ ಅಮೆಜಾನ್ ಫ್ಲಿಪ್ಕಾರ್ಟ್, ಗೋ ಡ್ಯಾಡಿ ಅಂತಹ ಪ್ರಾಡಕ್ಟ್ಸ್ ಗಳನ್ನೂ ನಮ್ಮ ವೆಬ್ಸೈಟ್ನಲ್ಲಿ ಲಿಂಕ್ ಹಾಕಬೇಕು ಅದರ ಬಗ್ಗೆ ಮಾಹಿತಿಯನ್ನು ಬರೆದರೆ ಸಾಕು ಸರ್ಚ್ ಇಂಜಿನ್ ನಲ್ಲಿ ರಾಂಕಾದ ನಿಮ್ಮ ಆರ್ಟಿಕಲ್ಸ್ ಓದುತ್ತಿರುವ ಜನರು ಲಿಂಕ್ ಕ್ಲಿಕ್ ಮಾಡಿ ಪ್ರಾಡಕ್ಟ್ಸ್ ಗಳನ್ನು ಪರ್ಚೇಸ್ ಮಾಡಿದರೆ ಸುಮಾರು ಎರಡರಿಂದ ಹತ್ತು ಪರ್ಸೆಂಟ್ ಕಮಿಷನ್ ನಿಮಗೆ ಸಿಗುತ್ತದೆ ನಿಮ್ಮ ಊಹೆಗೂ ಮೀರಿದ ವಿಷಯವೇನೆಂದರೆ ಹುಡುಗರು ಇತ್ತೀಚಿಗೆ ಈ ಕೆಲಸ ಮಾಡಿ ಮನೆಯಲ್ಲೇ ಕೂತು ಹಣ ಸಂಪಾದನೆ ಮಾಡುತ್ತಿದ್ದಾರೆ ನಿಮಗೇನಾದರೂ ಇದರ ಬಗ್ಗೆ ಅತಿ ಹೆಚ್ಚು ಆಸಕ್ತಿ ಇದ್ದರೆ ಕೆಲವು ಕೋರ್ಸ್ ಗಳನ್ನು ತೆಗೆದುಕೊಂಡು ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ನಂತರ ಬ್ಲಾಗಿಂಗ್ ಅನ್ನು ಪ್ರಾರಂಭಿಸಿ. ಕೆಲವರದ್ದು ಯಾವ ಕೆಲಸಕ್ಕೂ ಹೋಗದೆ ಮನೆಯಲ್ಲಿ ಕೂತು ಬ್ಲಾಗಿಂಗ್ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಾರೆ ಈ ರೀತಿ ನೀವು ಕೂಡ ಮಾಡಬಹುದು.

ಆರೋಗ್ಯ ಮಾಹಿತಿ Kannada Blog
ಆರೋಗ್ಯ ತೊಂದರೆಯಿಂದ ಬಳಲುತ್ತಾ ಇರುವವರು ಮನೆಯಲ್ಲಿ ಸಿಗುವ ಕೆಲವು ವಸ್ತುಗಳನ್ನು ಹೇಗೆ ಬಳಸಿಕೊಂಡು ಕಾಯಿಲೆ ಹುಷಾರು ಮಾಡಿಕೊಳ್ಳಬೇಕೆಂದು ಹುಡುಕಾಟ ಮಾಡುತ್ತಿರುತ್ತಾರೆ ಅದರಲ್ಲೂ ಹೆಚ್ಚಿನವರು ಅಲ್ಲಿಯವರೇ ಆಗಿರುತ್ತಾರೆ. ನಿಮಗೆ ಗೊತ್ತಿರುವ ಕೆಲವು ಆರೋಗ್ಯಕರ ಮಾಹಿತಿಯನ್ನು ಸವಿಸ್ತಾರವಾಗಿ ಬರೆದು ಪೋಸ್ಟ್ ಮಾಡಿದರೆ ಹಲವು ಜನರಿಗೆ ಖಂಡಿತ ಉಪಯೋಗವಾಗುತ್ತದೆ. ಅಕಸ್ಮಾತ್ ನಿಮಗೆ ಯಾವುದೇ ಮಾಹಿತಿ ಆರೋಗ್ಯ ವೃದ್ಧಿಸುವ ಬಗ್ಗೆ ತಿಳಿದಿಲ್ಲದಿದ್ದರೆ ಯೂಟ್ಯೂಬ್ ಅಥವಾ ಟಿವಿ ಚಾನಲ್ ಗಳನ್ನು ನೋಡಿ ತಿಳಿದುಕೊಂಡು ತದನಂತರ ಆರ್ಟಿಕಲ್ಸ್ ನಲ್ಲಿ ಬರೆಯಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ನೀವು ಮಂಡಿಸುವಾಗ ಸರಿಯಾಗಿ ತಿಳಿದುಕೊಂಡು ಬರೆಯಬೇಕು ಏಕೆಂದರೆ ಬೇರೆಯವರಿಗೆ ತುಂಬಾ ತೊಂದರೆಯಾಗುತ್ತದೆ ನಿಮ್ಮ ಆರ್ಟಿಕಲ್ ಸರಿ ಇಲ್ಲದೆ ಹೋದರೆ.