Youtube Kannada Channels | ಕನ್ನಡ ಯೂಟ್ಯೂಬ್ ಚಾನೆಲ್

ನೀವು youtube kannada channels ಕ್ರಿಯೇಟ್ ಮಾಡಿ ಅದರಿಂದ ಹಣ ಮಾಡಲು ಹುಡುಕಾಟ ನಡೆಸುತ್ತಿದ್ದೀರಾ ಹಾಗಿದ್ದರೆ ನಮ್ಮ ಬ್ಲಾಗಲ್ಲಿ ನಿಮಗೆ ಅದರ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ನೀಡಲಿದ್ದೇವೆ. ಯೂಟ್ಯೂಬ್ ಚಾನೆಲ್ ಮುಖಾಂತರ ಹೇಗೆ ಹಣ ಮಾಡುವುದು ಇದು ಸಾಧ್ಯವಾ ಎಂಬ ಪ್ರಶ್ನೆ ಹಲವರಲ್ಲಿದೆ ಖಂಡಿತ ಸಾಧ್ಯ ಹಲವರು ಈ ಪ್ಲಾಟ್ಫಾರ್ಮ್ ಅನ್ನು ಬಳಸಿಕೊಂಡು ಲಕ್ಷಗಟ್ಟಲೆ ದುಡ್ಡನ್ನು ಪ್ರತಿ ತಿಂಗಳು ದುಡಿಯುತ್ತಿದ್ದಾರೆ ಅದು ದೂರದಿಂದ ನೋಡಿದಾಗ ಸುಲಭ ಅನಿಸಿದರೂ ತುಂಬಾ ಕಷ್ಟ. ನೀವು ನಿಮ್ಮದೇ ಆದ ಚಾನೆಲ್ ಅನ್ನು ಹೇಗೆ ಪ್ರಾರಂಭಿಸಬೇಕು ಎಂಬುದನ್ನು ನಾವಿಲ್ಲಿ ಈಗ ವಿಸ್ತೃತವಾಗಿ ತಿಳಿಸಿದ್ದೇವೆ. ಕನ್ನಡದಲ್ಲಿ ಈಗಾಗಲೇ ಹಲವು ಯೂಟ್ಯೂಬ್ ಚಾನೆಲ್ ಗಳು ಇವೆ ಅವುಗಳಲ್ಲಿ ಅತಿ ಮುಖ್ಯವಾದವುಗಳನ್ನು ನಾವೀಗ ಇಲ್ಲಿ ನಿಮ್ಮ ಮುಂದೆ ಇಡಲಿದ್ದೇವೆ.


List of Youtube Kannada Channels

ಮೀಡಿಯಾ ಮಾಸ್ಟರ್
ಇದು ಒಂದು ಹಿಸ್ಟರಿ ಆಧಾರಿತ ವಿಡಿಯೋಗಳನ್ನು ತಮ್ಮ youtube kannada channels ನಲ್ಲಿ ಅಪ್ಲೋಡ್ ಮಾಡಿಕೊಂಡು ಬಂದಿದ್ದಾರೆ ಇದರಲ್ಲಿ ಪ್ರಸ್ತುತ ವಿಷಯಗಳಿಗೂ ಸಹ ಸಂಬಂಧಿಸಿದ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ ಈ ಕಾರಣದಿಂದಾಗಿ ಈ ಚಾನೆಲ್ ಬಹಳ ವೇಗವಾಗಿ ಮುನ್ನುಗುತ್ತಿದೆ ಇದೀಗ 22 ಲಕ್ಷಕ್ಕೂ ಅಧಿಕ ಜನರು ಸಬ್ಸ್ಕ್ರೈಬ್ ಆಗಿ ಅತಿ ಹೆಚ್ಚು ಸಬ್ಸ್ಕ್ರೈಬರ್ ಉಳ್ಳ ಕನ್ನಡ ಚಾನೆಲ್ ಎಂದೆ ಹೆಸರುವಾಸಿಯಾಗಿದೆ.
ಈ ಚಾನಲ್ ನಲ್ಲಿ ಪ್ರತಿನಿತ್ಯ ಎರಡು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ. ಕನಿಷ್ಠ 10 ರಿಂದ 20 ನಿಮಿಷದವರೆಗೆ ವಿಡಿಯೋಗಳು ಹೊಂದಿರುತ್ತವೆ ಜನರಿಗೆ ಹೆಚ್ಚು ಉಪಯುಕ್ತವಾದ ವಿಷಯಗಳನ್ನೇ ಇವರು ತಮ್ಮ ಕಂಟೆಂಟ್ನಲ್ಲಿ ಹಾಕುತ್ತಾರೆ ಹಾಗೂ ಯಾರು ಗೌರ್ನಮೆಂಟ್ ಜಾಬ್ ಗೆ ಹುಡುಕಾಟ ನಡೆಸುತ್ತಿದ್ದಾರೆ ಅವರಿಗೆ ಖಂಡಿತವಾಗಿಯೂ ಈ ಚಾನೆಲ್ ಒಳ್ಳೆಯ ವಿಷಯಗಳನ್ನು ನೀಡುತ್ತಾ ಬಂದಿದೆ.
ನಾವು ಈ ಚಾನೆಲ್ ನ ವಿಸ್ತೃತವಾಗಿ ಪರಿಶೀಲನೆ ಮಾಡಿದಾಗ ಕಂಡುಬಂದ ವಿಷಯವೇನೆಂದರೆ ಈ ಚಾನೆಲ್ ಅನ್ನು 2017 ಮಾರ್ಚ್ ರಂದು ಓಪನ್ ಮಾಡಲಾಗಿದೆ 58 ಕೋಟಿ ವೀಕ್ಷಣೆಯನ್ನು ಇವರ ವಿಡಿಯೋಗಳು ಒಂದಿವೆ. ಸುಮಾರು 4 ಅಧಿಕ ವಿಡಿಯೋಗಳನ್ನು ಇವರು ತಮ್ಮ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಕಲಾ ಮಾಧ್ಯಮ
ಇತ್ತೀಚಿನ ದಿನಗಳಲ್ಲಿ ಕನ್ನಡದ ಹೆಸರಾಂತ youtube kannada channels ಇದಾಗಿದೆ ಒಳಗೊಂಡ ಈ ಚಾನೆಲ್ ಹಲವರನ್ನು ಸಂದರ್ಶನ ಮಾಡಿ ಅವರಿಗಾದ ನೋವು ನಲಿವನ್ನು ತಮ್ಮ ಚಾನಲ್ನಲ್ಲಿ ತುಂಬಾ ಸೊಗಸಾಗಿ ಬಿದ್ದರ ಮಾಡುತ್ತಾ ಬಂದಿದ್ದಾರೆ ನಾವು ಈ ಚಾನಲ್ ಅನ್ನು ನೋಡಿದಾಗ ಕಂಡುಬಂದಿದ್ದು ಏನೆಂದರೆ 2014 ಅಕ್ಟೋಬರ್ ರಲ್ಲಿ ಈ ಚಾನಲ್ ಅನ್ನು ಓಪನ್ ಮಾಡಲಾಗಿದೆ 41 ಕೋಟಿ ಜನರು ಇವರ ವಿಡಿಯೋಗಳನ್ನು ವೀಕ್ಷಣೆ ಮಾಡಿದ್ದಾರೆ ಸುಮಾರು ಅಂದಾಜು 500ಕ್ಕೂ ಹೆಚ್ಚು ವಿಡಿಯೋಗಳನ್ನು ತಮ್ಮ ಚಾನಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ ಇದು ಇತ್ತೀಚಿನ ದಿನಗಳಲ್ಲಿ ತುಂಬಾ ಸೊಗಸಾಗಿ ಮೂಡಿ ಬರುತ್ತಿದೆ ಹೀಗೆ ಮುಂದುವರೆಯಲಿ ಎಂಬುದೇ ನಮ್ಮ ಆಸೆ.
ತುಂಬಾ ಸುಂದರವಾಗಿ ಹಳೆಯ ನಟರು ನಿರ್ದೇಶಕರು ನಟಿಯರನ್ನು ಸಂದರ್ಶನ ಮಾಡಿ ಅಕಸ್ಮಾತ್ ಅವರು ನಮ್ಮೊಂದಿಗೆ ಇರದಿದ್ದರೆ ಅವರು ಹೇಗೆ ಸತ್ತರೂ ಯಾವ ಕಾರಣದಿಂದಾಗಿ ನಮ್ಮನ್ನೆಲ್ಲ ಅಗಲಿದರೂ ಎಂಬ ವಿಷಯವನ್ನ ಸಂಪೂರ್ಣವಾಗಿ ಕಲೆಹಾಕಿ ನಮಗೆ ತಿಳಿಸಿಕೊಡುತ್ತಿದ್ದಾರೆ ಇತ್ತೀಚಿಗೆ ಬಂದ ಕಲ್ಪನಾ ಅವರ ಸಾವಿಗೆ ಕಾರಣವಾದ ವಿಡಿಯೋಗಳು ನೋಡಿ ನಮಗೆ ಮನಸ್ಸಿಗೆ ತುಂಬಾ ದುಃಖ ಆಗಿತ್ತು ಹಾಗೆ ಸ್ನೇಹವರು ಹೇಗೆ ತಮ್ಮ ಜೀವನವನ್ನು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟರು ಈ ರೀತಿಯ ಕಾರ್ಯಕ್ರಮಗಳನ್ನು ಇವರು ಮುಂದುವರಿಸಲಿ.

ಕನ್ನಡ ಸಂಜೀವಿನಿ
ಈ ಚಾನಲ್ನಲ್ಲಿ ಕೇವಲ ಆರೋಗ್ಯ ಡ್ಯೂಟಿಗೆ ಸಂಬಂಧಿಸಿದ ವಿಷಯಗಳನ್ನಷ್ಟೇ ಪ್ರಸ್ತಾಪ ಮಾಡುತ್ತಾರೆ ಇದೀಗ ಈ youtube ಚಾನಲ್ನಲ್ಲಿ ಆರು ಲಕ್ಷಕ್ಕೂ ಅಧಿಕ ಸಬ್ಸ್ಕ್ರೈಬರ್ ಇದ್ದಾರೆ ಈ ಯೂಟ್ಯೂಬ್ ಕನ್ನಡ ಚಾನೆಲ್ ಅನ್ನು 2017 ಜನವರಿ 24ರಂದು ತೆರೆಯಲಾಗಿದೆ ಇದುವರೆಗೂ ಎಂಟು ಕೋಟಿಗೂ ಅಧಿಕ ವ್ಯೂಸನ್ನು ಈ ಚಾನೆಲ್ ಹೊಂದಿದೆ ಇದು ನಮ್ಮ ಕನ್ನಡಿಗರೇ ನಡೆಸಿಕೊಂಡು ಬರುತ್ತಿರುವ ಚಾನೆಲ್ ಎಂದು ಹೇಳಲು ತುಂಬಾ ಖುಷಿಯಾಗುತ್ತದೆ. ವಾರಕ್ಕೆ ಎರಡರಿಂದ ನಾಲ್ಕು ವಿಡಿಯೋಗಳನ್ನು ಅಪ್ಲೋಡ್ ಮಾಡಿಕೊಂಡು ಬಂದಿದ್ದಾರೆ ಹೇಳಬೇಕೆಂದರೆ ಈ ಚಾನಲ್ ಅನ್ನು ಮಹಿಳೆಯರೇ ಹೆಚ್ಚಾಗಿ ನೋಡುತ್ತಿದ್ದಾರೆ ಏಕೆಂದರೆ ಇದು ಸೌಂದರ್ಯಕ್ಕೆ ಸಂಬಂಧಿಸಿದ ಚಾನೆಲ್ ಆಗಿದೆ.

ಕೆಕೆ ಟಿವಿ
ಇದರ ಬಗ್ಗೆ ಹೆಚ್ಚಿಗೆ ಯಾರಿಗೂ ತಿಳಿದಿಲ್ಲ ಆದರೆ ಇದೊಂದು ತುಂಬಾ ಪ್ರಸಿದ್ಧ ಕನ್ನಡ ಯೌಟ್ಯೂಬ್ ಚಾನೆಲ್ ಆಗಿ ಹೊರ ಬಂದಿದೆ ಕಾರಣ ಇದರಲ್ಲಿ ಪ್ರಪಂಚದಾದ್ಯಂತ ನಡೆಯುತ್ತಿರುವ ಭಯಾನಕ ವಿಷಯಗಳನ್ನು ತಿಳಿಸಿಕೊಡುತ್ತಾರೆ ಹಾಗೂ ವಿಜ್ಞಾನಿಕ ಸಂಬಂಧಿಸಿದ ವಿಷಯಗಳನ್ನೇ ಅತಿ ಹೆಚ್ಚು ಹಾಕುತ್ತಾರೆ ಈ ಕಾರಣದಿಂದಾಗಿ ಇಂದಿನ ಶಾಲಾ ಮಕ್ಕಳು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಯಸ್ಸಾದವರು ಎಲ್ಲಾ ಜನರು ಈ ಚಾನಲ್ ಅನ್ನು ವೀಕ್ಷಣೆ ಮಾಡುತ್ತಾರೆ. ನಾವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಚಾನಲ್ನ ಒಳಹೊಕ್ಕಾಗ ಇದರಲ್ಲಿ ಇದೀಗ 12 ಲಕ್ಷಕ್ಕೂ ಅಧಿಕ ಸಬ್ಸ್ಕ್ರೈಬರ್ಸ್ ಇದ್ದಾರೆ ಈ ಚಾನೆಲ್ ಅನ್ನು 2017 ಜನವರಿ 16ರಂದು ಪ್ರಾರಂಭಿಸಲಾಗಿದೆ 24 ಕೋಟಿ ಹೆಚ್ಚು ವೀವ್ಸ್ ಗಳನ್ನು ಇವರ ವಿಡಿಯೋಗಳು ಒಳಗೊಂಡಿವೆ ಎಂಬುದೇ ವಿಶೇಷ.

ಈ ಯೂಟ್ಯೂಬ್ ಕನ್ನಡ ಚಾನೆಲ್ ನ ಹೆಸರೇ ತುಂಬಾ ವಿಶೇಷವಾಗಿದೆ ಇವರು ನಮ್ಮ ಉತ್ತರ ಕರ್ನಾಟಕದವರು ಎಲ್ಲಾ ರೀತಿಯ ಅಡುಗೆ ವಿಡಿಯೋಗಳನ್ನು ತಮ್ಮ ಚಾನೆಲ್ ನಲ್ಲಿ ಹಾಕಿಕೊಂಡು ಬಂದಿದ್ದಾರೆ ತುಂಬಾ ವಿಶೇಷತೆ ಏನೆಂದರೆ ಈ ಚಾನಲ್ ಅನ್ನು 8 ಲಕ್ಷಕ್ಕೂ ಅಧಿಕ ಜನರು ಸಬ್ಸ್ಕ್ರೈಬ್ ಆಗಿದ್ದಾರೆ 2017ರಲ್ಲಿ ಪ್ರಾರಂಭವಾದ ಈ ಚಾನಲ್ ಇದುವರೆಗೂ 14 ಕೋಟಿಗೂ ಹೆಚ್ಚು ವೀವ್ಸ್ ಗಳನ್ನು ಒಳಗೊಂಡಿದೆ ವಾರದಲ್ಲಿ ಒಂದರಿಂದ ಎರಡು ವಿಡಿಯೋಗಳನ್ನು ಇವರು ಹಾಕಿಕೊಂಡು ಬಂದಿದ್ದಾರೆ, ವಿಶೇಷವಾದ ಊಟಗಳನ್ನು ಹೇಗೆ ಮಾಡಬೇಕು ಎಂದು ಇವರು ಸಂಪೂರ್ಣವಾಗಿ ತಿಳಿಸಿ ಕೊಡುತ್ತಾರೆ ವೃತ್ತಿಯಲ್ಲಿ ಅಡುಗೆ ಭಟ್ಟ ರಾಗಿರುವ ಇವರು ತುಂಬಾ ಚೆನ್ನಾಗಿ ಜನರಿಗೆ ಕರ್ನಾಟಕದ ವಿಶೇಷ ತಿನಿಸುಗಳನ್ನು ಹೇಗೆ ಮಾಡುವುದು ಎಂದು ತಿಳಿಸಿ ಕೊಡುತ್ತಿದ್ದಾರೆ ಇದು ನಮ್ಮೆಲ್ಲರ ಹೆಮ್ಮೆ.

ಇದು ಒಂದು ವಿಶೇಷ ಸ್ಥಾನ ಏಕೆಂದರೆ 24 ವರ್ಷದ ಹುಡುಗ ಪ್ರಪಂಚವನ್ನು ಸುತ್ತಾಡುವ ಮುಖಾಂತರ ನಮ್ಮದೇ ಆದ ಶೈಲಿಯಲ್ಲಿ ವಿಡಿಯೋಗಳನ್ನು ಹಲವು ಪ್ರದೇಶಗಳನ್ನು ಸುತ್ತಾಡುವಾಗ ಮಾಡಿಕೊಂಡು ಬರುತ್ತಾರೆ, ವಿವಿಧ ಪ್ರದೇಶಗಳ ಸಂಪೂರ್ಣ ಮಾಹಿತಿಯನ್ನು ಇವರು ತಮ್ಮದೇ ಆದ ಶೈಲಿಯಲ್ಲಿ ನೀಡುತ್ತಾ ಬಂದಿದ್ದಾರೆ ಇದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ ಬಿಕಾಂ ಸ್ಟೂಡೆಂಟ್ ಆಗಿರುವ ಈತ ಇತ್ತೀಚಿಗಷ್ಟೇ ತಮ್ಮ ಗ್ರಾಜುಯೇಷನ್ ಮುಗಿಸಿದರು ಪ್ರಾರಂಭದಲ್ಲಿ ಕೇವಲ ಬೆಂಗಳೂರಿನ ತೋರಿಸುತ್ತಿದ್ದ ಗೀತ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ದೇಶಗಳನ್ನು ಸಹ ಸುತ್ತಾಡಿಕೊಂಡು ವಿಡಿಯೋ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ ಇದು ನಮ್ಮೆಲ್ಲರ ಹೆಮ್ಮೆಗೆ ತುಂಬಾ ಕಾರಣವಾಗಿದೆ.
ಡಾ. ಬ್ರೋ ಚಾನೆಲ್ ಅನ್ನು ಒಳಹಕ್ಕಿ ನಾವು ನೋಡಿದಾಗ ನಮಗೆ ತಿಳಿದು ಬಂದ ವಿಷಯ ಏನೆಂದರೆ ಈ ಚಾನಲ್ನಲ್ಲಿ 10 ಲಕ್ಷಕ್ಕೂ ಅಧಿಕ ಸಬ್ಸ್ಕ್ರೈಬರ್ ಆಗಿದ್ದಾರೆ ಹಾಗೂ ಇದುವರೆಗೂ ಎಂಟು ಕೋಟಿಗೂ ಹೆಚ್ಚು ವೀವ್ಸ್ ಗಳನ್ನು ಒಳಗೊಂಡಿರುವ ಈ ಚಾನಲ್ 2018 ರಲ್ಲಿ ಪ್ರಾರಂಭಿಸಲಾಗಿದೆ ಬೇರೆ ಬೇರೆ ದೇಶಗಳನ್ನು ಸುತ್ತಿ ವಿಡಿಯೋ ಮಾಡಿ ತುಂಬಾ ಚೆನ್ನಾಗಿ ನಮಗೆ ಮಾಹಿತಿಯನ್ನು ನೀಡುತ್ತಿದ್ದಾರೆ ಈ ಕಾರಣಕ್ಕಾಗಿ ಈ ಜನ ಯಾರು ಟ್ರಾವೆಲ್ ಮಾಡಲು ಇಷ್ಟಪಡುತ್ತಾರೋ ಅವರಿಗೆ ಒಳ್ಳೆಯ ಕಂಟೆಂಟ್ ಗಳನ್ನು ನೀಡುತ್ತದೆ ಖಂಡಿತವಾಗಿಯೂ ಸಬ್ಸ್ಕ್ರೈಬ್ ಆಗಿ.

ಮಸ್ತ್ ಮಗ
ಇದು ಒಂದು ಕನ್ನಡ ನ್ಯೂಸ್ ಚಾನೆಲ್ ಟಿವಿ9 ಹಾಗೂ ಪಬ್ಲಿಕ್ ಟಿವಿ ಆಂಕರ್ ಆಗಿದ್ದ ಅಮರ್ ಪ್ರಸಾದ್ ಈ ಚಾನಲ್ ಅನ್ನು ತುಂಬಾ ಚೆನ್ನಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಈ ಯೂಟ್ಯೂಬ್ ಕನ್ನಡ ಚಾನೆಲ್ ನಲ್ಲಿ ಇದುವರೆಗೂ 10 ಲಕ್ಷಕ್ಕೂ ಅಧಿಕ ಸಬ್ಸ್ಕ್ರೈಬರ್ ಆಗಿದ್ದಾರೆ ಇದನ್ನು 2019ರಲ್ಲಿ ಪ್ರಾರಂಬಿಸಲಾಗಿದ್ದು ಪ್ರತಿನಿತ್ಯ ಕನಿಷ್ಠ ಎರಡು ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾ ಬಂದಿದ್ದಾರೆ ಇನ್ನು ನಾವು ಈ ಚಾನಲ್ನ ಹೊಳವಕ್ಕಿ ನೋಡಿದಾಗ ತಿಳಿದುಬಂದ ವಿಷಯವೇನೇ ಎಂದರೆ ಇದುವರೆಗೂ 20 ಕೋಟಿದೆ ಎಂಬುದೇ ಇದರ ವಿಶೇಷ.
ಬೇರೆ ನ್ಯೂಸ್ ವಾಹಿನಿಗಳನ್ನು ಕಂಪೇರ್ ಮಾಡಿ ನೋಡಿದಾಗ ನಿಮಗೆ ಅನ್ನಿಸುತ್ತದೆ ಈ ಚಾನಲ್ ನಲ್ಲಿ ಒಳ್ಳೆಯ ವಿಷಯಗಳನ್ನು ಹಾಕುತ್ತಿದ್ದಾರೆ ಜನರಿಗೆ ಖಂಡಿತವಾಗಿಯೂ ವಿಡಿಯೋಗಳು ಇಷ್ಟವಾಗಲಿವೆ ಕೇವಲ ಸಮಾಜ ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಈ ಚಾನಲ್ ಅನ್ನು ಪ್ರಾರಂಭಿಸಲಾಗಿದೆ ಖಂಡಿತವಾಗಿಯೂ ಕರ್ನಾಟಕ ಎಲ್ಲರೂ ಈ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಫಾಲೋ ಮಾಡಿ ಇವರು ಪ್ರತಿನಿತ್ಯ ಹಾಕುವ ವಿಡಿಯೋಗಳನ್ನು ನೋಡಿ ಹಲವಾರು ವಿಷಯಗಳನ್ನು ತಿಳಿದುಕೊಳ್ಳಿ ಅದರಲ್ಲೂ ಯಾರು ಗೌರ್ನಮೆಂಟ್ ಜಾಬ್ ಹುಡುಕಾಟದಲ್ಲಿ ಇರುತ್ತಾರೆ ಅವರಿಗಂತು ಇಲ್ಲಿ ಸಿಗುವ ಕಂಟೆಂಟ್ ಗಳು ಬೇರೆಲ್ಲೂ ಸಿಗುವುದಿಲ್ಲ ಎಂದು ಹೇಳಲು ನಾವು ಬಯಸುತ್ತೇವೆ.