ಆದಿಮಾನವರು ನಿರ್ಮಿಸಿಕೊಂಡಿದ್ದ ಮನೆ ಅವಶೇಷಗಳ ಆಧಾರವಾಗಿಟ್ಟುಕೊಂಡು ನಮ್ಮ ಇತಿಹಾಸ ತಜ್ಞರು ಅಧ್ಯಯನ ನಡೆಸಿದ ನಂತರ ಹಲವಾರು ಮಾಹಿತಿಗಳು ಹೊರಬಂದವು, ಅದರಲ್ಲಿ ಬಹು ಮುಖ್ಯವಾಗಿ ನಮ್ಮ ಹಿರಿಯರು ಉದಾಹರಣೆಗೆ ಸಿಂಧೂ ಬಯಲಿನ ನಾಗರಿಕತೆ ತೆಗೆದುಕೊಂಡರೆ ಆಗಿನ ಕಾಲದಲ್ಲೇ ಜನರು ಮಡಿಕೆಗಳನ್ನ ತಯಾರಿಸಿಕೊಳ್ಳುತ್ತಿದ್ದರು ಕೆಲವು ನಾಣ್ಯಗಳು ಸಹ ಪತ್ತೆಯಾಗಿವೆ ನಮ್ಮ ಕರ್ನಾಟಕದಲ್ಲಿ ಪತ್ಯಾದ ತುಂಬಾ ಹಳೆಯ ಶಾಸನ ಹಲ್ಮಿಡಿ ನಮಗೆಲ್ಲ ಗೊತ್ತೇ ಇದೆ ಇದರ ಮುಖಾಂತರ ಅಂದಿನ ಕಾಲದಲ್ಲಿ ಬಳಸಲಾಗುತ್ತಿದ್ದ ಭಾಷೆ ಹೇಗೆ ಅವರು ಜೀವನ ನಡೆಸುತ್ತಿದ್ದರು ಎಂಬುದರ ಸುಳಿವು ನಮಗೆ ಸಿಕ್ಕಿದೆ ಅದೇ ರೀತಿ ಸಿಂಧು ಬಯಲಿನ ನಾಗರಿಕತೆ ಅಧ್ಯಯನ ಮಾಡಿದ ನಮ್ಮ ಇತಿಹಾಸ ಜನರಿಗೆ ತಿಳಿದುಬಂದ ಹಲವು ವಿಷಯಗಳು ಹೀಗಿವೆ ಆಗಿನ ಕಾಲದಲ್ಲೇ ಇಟ್ಟಿಗೆಯಿಂದ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದರು ಜೊತೆಗೆ ಒಳಚರಂಡಿ ವ್ಯವಸ್ಥೆ ಕೂಡ ಆಗಿನ ಕಾಲದಲ್ಲಿ ಇತ್ತು ಸ್ನಾನ ಮಾಡಲು ಸ್ವಿಮ್ಮಿಂಗ್ ಪೂಲ್ ಗಳನ್ನು ಸಹ ಜನರು ಬಳಸುತ್ತಿದ್ದರು ಜನರು ಬಳಸಿ ಅವಶೇಷವಾದ ಅಡುಗೆ ಪಾತ್ರೆಗಳು ದೇವರ ವಿಗ್ರಹಗಳು ಇವೆಲ್ಲ ಸಂಪೂರ್ಣವಾಗಿ ಅಧ್ಯಯನ ನಡೆಸಿದ ನಮ್ಮ ಇತಿಹಾಸಜ್ಞರು ನಾಣ್ಯಗಳು ಆಭರಣಗಳು ಜನರು ಬಳಸುತ್ತಿದ್ದ ಕೆಲವು ಕೆಲಸದ ಸಲಕರಣೆಗಳು ಮನೆಯಲ್ಲಿ ಬಳಸುತ್ತಿದ್ದ ವಸ್ತುಗಳು ಜೇಡಿ ಮಣ್ಣಿನಿಂದ ತಯಾರಿಸಿದ ಕೆಲವು ಪ್ರತಿ ಕೃತಿಗಳು ಇದ್ದದ್ದಲ್ಲಿ ಬಳಸುತ್ತಿದ್ದ ಆಯುಧಗಳು ಮುಂತಾದವುಗಳನ್ನು ಮೂಲಾಧಾರವಾಗಿಟ್ಟುಕೊಂಡು ಆಗಿನ ಕಾಲದ ಜನರು ಹೇಗೆಲ್ಲಾ ಜೀವನ ನಡೆಸಿದ್ದಾರೆ ಎಂಬುದನ್ನ ಊಹಿಸಿ ಇತಿಹಾಸದಲ್ಲಿ ನಮಗೆ ಪ್ರಸ್ತುತಪಡಿಸಿದ್ದಾರೆ.
ಪುರಾತತ್ವ ಆಧಾರಗಳು ಎಂದರೇನು ?
ಆಗಿನ ಕಾಲದಲ್ಲೇ ಜನರು ವೈಜ್ಞಾನಿಕವಾಗಿ ಹಲವು ವಿಷಯಗಳನ್ನ ತಿಳಿದುಕೊಂಡಿದ್ದರು ಸೂರ್ಯ ಗ್ರಹಣ ಚಂದ್ರ ಗ್ರಹಣ ನಕ್ಷತ್ರಗಳು ಗ್ರಹಗಳು ಗ್ರಹಣ ಏಕೆ ಉಂಟಾಗುತ್ತೆ ಅನ್ನುವುದನ್ನೆಲ್ಲಾ ತುಂಬಾ ಚೆನ್ನಾಗಿ ಆಗಿನ ಕಾಲದ ಜನರು ಅರಿತುಕೊಂಡಿದ್ದರು. ಹಿಂದಿನ ಕಾಲದಲ್ಲಿ ಅವರ ಮುಖ್ಯ ಇತಿಹಾಸ ವ್ಯವಸಾಯವಾಗಿತ್ತು ಬೇಸಾಯ ಮಾಡಿ ಅದರಿಂದ ಬಂದ ಬೆಳೆಯನ್ನ ಮಾರಿ ಜೀವನ ನಡೆಸುತ್ತಿದ್ದರು. ಮೊದಲು ಕೇವಲ ಧಾನ್ಯಗಳನ್ನ ಬದಲಾಯಿಸಿಕೊಂಡು ಜೀವನ ನಡೆಸುತ್ತಿದ್ದ ಜನರು ಈ ರೀತಿ ಮಾಡುವುದು ತುಂಬಾ ಕಷ್ಟ ಎಂದು ತಿಳಿದ ಮೇಲೆ ನಾಣ್ಯವನ್ನು ಹೊರ ತಂದರು. ನಾಣ್ಯದ ಬದಲು ಧಾನ್ಯವನ್ನ ಪಡೆಯಬಹುದು ಎಂಬ ಆಚರಣೆ ಕೂಡ ಅಂದಿನ ಕಾಲದಲ್ಲಿ ಇತ್ತು ಚುಲಯೋಗದ ಕಾಲದಲ್ಲೇ ವೈಜ್ಞಾನಿಕ ಉಪಕರಣಗಳನ್ನು ಬಳಸುತ್ತಿದ್ದರು ಎಂಬುದಕ್ಕೆ ಹಲವು ಸಾಕ್ಷಿಗಳು ಸಿಕ್ಕಿವೆ, ಉತ್ಕನನ ನಡೆಸಿದ ನಮ್ಮ ಇತಿಹಾಸಕ್ಯರಿಗೆ ಪಳೆಯುಳಿಕೆಗಳಿಂದ ತಿಳಿದುಬಂದ ವಿಷಯ ಕೃಷಿ ನಡೆಸಲು ಜನರು ಕೆಲವು ಸಲಕರಣೆಗಳನ್ನ ಬಳಸುತ್ತಿದ್ದರು ಎಂಬುದು ಸಹ ತಿಳಿದು ಬಂದಿದೆ, ಮುತ್ಕನನ ಎಂದರೆ ಹಿಂದಿನ ಕಾಲದ ಜನರ ಜೀವನ ವಿಧಾನವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಆಗಿನ ಕಾಲದ ಜನರು ನೆಲೆಸಿದ್ದ ನೆಲವನ್ನ ಅಗೆದು ಅಲ್ಲಿ ಸಿಕ್ಕ ಕೆಲವು ವಸ್ತುಗಳನ್ನ ಅಧ್ಯಯನ ಮಾಡಿ ಅವರ ಜೀವನ ಕ್ರಮವನ್ನು ತಿಳಿದುಕೊಳ್ಳುವುದು ಎಂದರ್ಥ.
ನಮ್ಮ ಪ್ರಾಕ್ತನ ಆಧಾರಗಳು ಇಲಾಖೆ ಒಟ್ಟು ನಾಲ್ಕು ವಿಧಗಳಲ್ಲಿ ಉತ್ಕನನ ನಡೆಸಿದ ಸಮಯದಲ್ಲಿ ಸಿಕ್ಕ ವಸ್ತುಗಳನ್ನ ವಿಂಗಡಿಸುತ್ತಾರೆ.
ಶಾಸನಗಳು ಸ್ಮಾರಕಗಳು ನಾಣ್ಯ ಇತರೆ ಅವಶೇಷಗಳು
ಶಾಸನಗಳು ಎಂದರೆ ಕಲ್ಲುಗಳ ಮೇಲೆ ಅಥವಾ ಲೋಹ ಹಾಗೂ ಸುಟ್ಟ ಮಣ್ಣಿನಿಂದ ತಯಾರಿಸಿದ ಹಲಗೆ ಮೇಲೆ ಹಲವು ರೀತಿಯ ಬರವಣಿಗೆಯನ್ನ ಹಿಂದಿನ ಕಾಲದಲ್ಲಿ ಜನರು ಮಾಡುತ್ತಿದ್ದರು ಇಂತಹ ವಸ್ತುಗಳು ಸಿಕ್ಕ ನಂತರ ಅದರಲ್ಲಿ ಏನೆಲ್ಲ ಬರೆದಿದೆ ಎಂಬುದನ್ನ ಇತಿಹಾಸಜ್ಞರು ತಿಳಿದುಕೊಳ್ಳಲು ಪ್ರಯತ್ನ ಪಡುತ್ತಾರೆ. ನಮ್ಮ ದೇಶದಲ್ಲಿ ಆಳಿದ ಅಶೋಕನ ಹಲವು ಶಾಸನಗಳು ನಮಗೆ ಸಿಕ್ಕಿವೆ ಇದರಿಂದ ನಮಗೆ ತಿಳಿದುಬಂದದು ಆಗಿನ ಕಾಲದಲ್ಲಿ ಬಳಸುತ್ತಿದ್ದ ಲಿಪಿಯಾಗಿತ್ತು ಈ ಭಾಷೆಯನ್ನು ಹಲವು ಜನರು ತಮ್ಮ ಆಳ್ವಿಕೆ ಸಮಯದಲ್ಲಿ ಬಳಸುತಿದ್ದರು, ಇಮ್ಮಡಿ ಪುಲಕೇಶಿ ಕಾರ ವೇಲನ ಶಾಸನ ಮುಂತಾದವುಗಳು ನಮಗೆ ಸಿಕ್ಕಿವೆ ಇದರಿಂದ ನಮಗೆ ಆಗಿನ ಕಾಲದ ಲಿಪಿ ಹೇಗಿತ್ತು ಎಂಬುದು ತಿಳಿದು ಬರುತ್ತದೆ ಇನ್ನು ಚೋಳರ ಕಾಲದಲ್ಲಿ ಹಲವು ದೇವಸ್ಥಾನಗಳು ನಿರ್ಮಾಣಗೊಂಡಿವೆ ದೇವಸ್ಥಾನದ ಮುಂದೆ ಹಲವು ರೀತಿಯ ಲಿಪಿಯನ್ನ ಬಳಸುತ್ತಿದ್ದರು ಕಿತ್ತನೆ ಕಾರ್ಯವನ್ನು ನಡೆಸಲು ಇದರಿಂದ ಕೂಡ ನಮಗೆ ಹಲವು ರೀತಿಯ ಹಿಂದಿನ ಕಾಲದ ಘಟನೆಗಳನ್ನು ತಿಳಿದುಕೊಳ್ಳಲು ತುಂಬಾ ಸಹಕಾರಿಯಾಗಿದೆ ಇನ್ನೂ ಸಿಂಧು ಬಯಲಿನ ನಾಗರಿಕತೆ ಅಲ್ಲಿ ಸಿಕ್ಕಿರುವ ಲಿಪಿ ಏನೆಂದು ನಮಗೆ ಇನ್ನೂ ಸಹ ತಿಳಿದು ಬಂದಿಲ್ಲ ಅಶೋಕ ಒರಿಸ್ಸಾ ಕರ್ನಾಟಕ ಶ್ರೀಲಂಕಾ ಮುಂತಾದ ಕಡೆ ಇವನ ಶಾಸನಗಳು ಸಿಕ್ಕಿವೆ.
ನಾಣ್ಯಗಳು ಇಂದಿನ ಕಾಲದಲ್ಲಿ ಚಿನ್ನದ ನಾಣ್ಯಗಳು ಕಂಚಿನ ನಾಣ್ಯ ಬೆಳ್ಳಿ ನಾಣ್ಯ ಹಿತ್ತಾಳೆ ಹಾಗೂ ಮಣ್ಣಿನಿಂದ ಮಾಡಿದ ನಾಣ್ಯಗಳನ್ನು ಜನರು ಬಳಸುತ್ತಿದ್ದರು ನಮ್ಮ ಬಳಿ ಹಲವು ಉದಾಹರಣೆಗಳು ಸಿಕ್ಕಿವೆ ಅದರಲ್ಲಿ ಬಳಸಿದ ಭಾಷೆಯನ್ನ ಓದಿ ಅರ್ಥೈಸಿಕೊಂಡ ನಮ್ಮ ಇತಿಹಾಸಜ್ಞರು ಆಗಿನ ಕಾಲದ ರಾಜರು ಯಾವ ಭಾಷೆಯನ್ನು ಬಳಸುತ್ತಿದ್ದರು ಎಂಬುದನ್ನ ವಿವರವಾಗಿ ತೆರೆದಿಟ್ಟಿದ್ದಾರೆ ಸಮುದ್ರ ಗುಪ್ತನ ಕಾಲದಲ್ಲಿ ಒಟ್ಟು ಏಳು ರೀತಿಯ ಚಿನ್ನದ ನಾಣ್ಯಗಳನ್ನು ಮಾಡಿಸಿದ್ದನು ಅದರ ಮೇಲೆ ಸಮುದ್ರಗುಪ್ತ ಹೆಚ್ಚು ಸಂಗೀತವನ್ನು ಕೇಳುತ್ತಿದ್ದ ಹಾಗಾಗಿ ಸಂಗೀತದ ಕೆಲವು ನೃತ್ಯ ಮಾಡುವ ಜನರನ್ನ ಹಚ್ಚೆ ಹಾಕಿಸಿದ್ದಾನೆ, ಕೆಲವು ಮಣ್ಣಿನಿಂದ ಮಾಡಿದ ನಾಣ್ಯಗಳು ಸಹ ನಮಗೆ ದೊರಕಿವೆ ಆ ನಾಣ್ಯಗಳ ಮೇಲೆ ಕೆಲವು ಲಿಪಿಗಳನ್ನು ಬಳಸಿ ಅಕ್ಷರಗಳನ್ನ ಬರೆಯಲಾಗಿದೆ ಅವುಗಳನ್ನ ಓದಿ ನಾವು ಅರ್ಥೈಸಿಕೊಳ್ಳಬಹುದು ಆಗಿನ ಕಾಲದ ರಾಜರು ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು ಹೇಗೆಲ್ಲಾ ರಾಜ್ಯಭಾರ ಮಾಡುತ್ತಿದ್ದರು ಎಂಬುದಕ್ಕೆ ಈ ನಾಣ್ಯಗಳೆ ಸಾಕ್ಷಿಯಾಗಿವೆ.
ಸ್ಮಾರಕಗಳು ಹಲವು ರೀತಿಯಲ್ಲಿ ನಮ್ಮ ಇತಿಹಾಸವನ್ನು ತಿಳಿದುಕೊಳ್ಳಲು ತುಂಬಾ ಸಹಕಾರಿಯಾಗಿವೆ ನಮ್ಮ ದೇವಸ್ಥಾನಗಳಲ್ಲಿ ಹಲವು ಸ್ತಂಭಗಳಿವೆ, ಅದರ ಮೇಲೆ ವಿವಿಧ ರೀತಿಯ ಮೂರ್ತಿಗಳು ಅಕ್ಷರಗಳನ್ನ ಕೆತ್ತಲಾಗಿದೆ ಇದನ್ನೆಲ್ಲಾ ಅಭ್ಯಾಸ ಮಾಡಿ ಆಗಿನ ಕಾಲದ ಜನರ ಜೀವನ ರೀತಿ ಹೇಗಿತ್ತು ಎಂಬುದನ್ನ ತುಂಬಾ ಸುಲಭವಾಗಿ ತಿಳಿದುಕೊಳ್ಳಬಹುದು ನಮ್ಮ ರಾಜ್ಯದಲ್ಲಿರುವ ಅಜಂತಾ ಎಲಿಫೆಂಟಾ ಎಲ್ಲೋರಾ ಗುಹೆಗಳನ್ನು ಸಹ ಹಲವು ರೀತಿಯ ಕೆತ್ತನೆ ಕಾರ್ಯಗಳನ್ನು ನೀವು ಗಮನಿಸಿದರೆ ಆಗಿನ ಕಾಲದ ಜನರು ಹೇಗೆ ಜೀವನ ನಡೆಸುತ್ತಿದ್ದರು ಎಂಬುದು ತುಂಬಾ ಚೆನ್ನಾಗಿ ತಿಳಿದು ಬರುತ್ತದೆ ನಮ್ಮ ದೇಶದ ಜನರು ತುಂಬಾ ಬುದ್ಧಿವಂತರಾಗಿದ್ದರು ಹಾಗಾಗಿ ದೇವಸ್ಥಾನಗಳ ಮೇಲೆ ತಮ್ಮ ಜೀವನ ರೀತಿ ಹೇಗೆ ನಡೆಯುತ್ತಿತ್ತು ಏನೆಲ್ಲಾ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂಬುದನ್ನು ದೇವಸ್ಥಾನಗಳಲ್ಲಿ ವಿಗ್ರಹಗಳನ್ನು ಗೋಡೆಯ ಮೇಲೆ ತುಂಬಾ ಚೆನ್ನಾಗಿ ಕೆತ್ತಿದ್ದರೂ ಅದನ್ನು ನೋಡಿದ ಜನರು ತುಂಬಾ ಸುಲಭವಾಗಿ ತಮ್ಮ ಜೀವನದಲ್ಲಿ ಅವನ್ನೆಲ್ಲ ಅಳವಡಿಸಿಕೊಳ್ಳಬಹುದಾಗಿತ್ತು. ನಮ್ಮ ದೇಶದಲ್ಲಿ ಸಿಕ್ಕಿರುವ ಹಲವು ಸ್ಮಾರಕಗಳನ್ನ ಅಧ್ಯಯನ ನಡೆಸಿದರೆ ಆಗಿನ ಕಾಲದ ಸಂಸ್ಕೃತಿ ಪರಂಪರೆ ಭಾಷೆ ಜನರ ಜೀವನ ರೀತಿ ಹೇಗಿತ್ತು ಎಂಬುದನ್ನ ತುಂಬಾ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ನೀವೇನಾದರೂ ದೇವಸ್ಥಾನಗಳಿಗೆ ಹೋದರೆ ದೇವಸ್ಥಾನದ ಗೋಡೆಯ ಮೇಲೆ ಏನೆಲ್ಲಾ ವಿಗ್ರಹಗಳನ್ನು ಕೆತ್ತಿದ್ದಾರೆ ಅವನ್ನು ನೋಡಿ ಅರ್ಥೈಸಿಕೊಳ್ಳಬಹುದು.