ಕೆಲವರು ಕೇವಲ ಮದುವೆಯ ಕುಂಡಲಿಯನ್ನು ನೋಡಿ ಮಾತ್ರ ಒಪ್ಪಿಗೆಯನ್ನು ಸೂಚಿಸುತ್ತಾರೆ ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ನಮ್ಮ ಜನರಿಗೆ ಗೊತ್ತಿಲ್ಲ ಏಕೆಂದರೆ ಒಬ್ಬೊಬ್ಬರ ಮನಸ್ಥಿತಿ ಬೇರೆ ಇರುತ್ತೆ ಹಾಗಾಗಿ ಮದುವೆಯಾದ ಗಂಡು-ಹೆಣ್ಣು ಮನಸ್ಥಿತಿ ಒಂದೇ ಇದ್ದರೆ ತುಂಬಾ ಒಳ್ಳೆಯದು ಇಲ್ಲವಾದಲ್ಲಿ ತುಂಬಾ ಸಮಸ್ಯೆಯನ್ನ ಎದುರಿಸಬೇಕಾಗುತ್ತದೆ ಒಬ್ಬರ ಮೇಲೆ ಇನ್ನೊಬ್ಬರಿಗೆ ಪ್ರೀತಿ ಬರುವುದಿಲ್ಲ ಕೇವಲ ಮನಸ್ತಾಪಗಳನ್ನೇ ಇಟ್ಟುಕೊಂಡು ಜೊತೆಯಲ್ಲಿ ಜೀವನ ಸಾಗಿಸುವುದಕ್ಕೆ ಖಂಡಿತ ಯಾರಿಂದಲೂ ಸಾಧ್ಯವಿಲ್ಲ ಹಾಗಾಗಿ ಕೇವಲ ಕುಂಡಲಿಯನ್ನು ನೋಡಿ ಮದುವೆಯನ್ನ ಫಿಕ್ಸ್ ಮಾಡುವ ಬದಲು ಗಂಡು ಹಾಗೂ ಹೆಣ್ಣಿನ ಮನಸ್ಥಿತಿ ಹೇಗಿದೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುತ್ತಾರ ಎಂಬುದನ್ನು ತಿಳಿದುಕೊಂಡು ನಂತರವೇ ಮದುವೆಯನ್ನ ಮಾಡಲು ಮುಂದಾಗಬೇಕು ಇಲ್ಲವಾದಲ್ಲಿ ತುಂಬಾ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಮದುವೆಯನ್ನ ವದುರರಿಗೆ ಮಾಡುವ ಮೊದಲು ಯಾವೆಲ್ಲ ಗ್ರಹಗಳು ಒಂದಕ್ಕೊಂದು ಇಷ್ಟ ಪಡುತ್ತೆ ಹಾಗೂ ಒಂದಕ್ಕೆ ಇನ್ನೊಂದು ಆಗುವುದಿಲ್ಲ ಎಂಬುದನ್ನು ಖಂಡಿತವಾಗಿ ಸರಿಯಾಗಿ ತಿಳಿದುಕೊಳ್ಳಬೇಕು ಏಕೆಂದರೆ ಉದಾಹರಣೆಗೆ ಸಿಂಹ ಹಾಗೂ ಮೇಕೆ ಈ ಎರಡು ರಾಶಿಗಳು ಒಂದಕ್ಕೊಂದು ಆಗೋದಿಲ್ಲ ಹಾಗಾಗಿ ವಧು-ವರರ ರಾಶಿ ಈ ಎರಡು ಆಗಿದ್ದರೆ ಖಂಡಿತ ಮದುವೆಯನ್ನ ಮಾಡಬಾರದು ಎಂದು ನಮ್ಮ ಪೂರ್ವಜರು ಹೇಳಿದ್ದಾರೆ ಈ ರೀತಿಯ ರೂಲ್ಸ್ ಗಳನ್ನ ಹೇಗೆ ನಮ್ಮ ಪೂರ್ವಜರು ನಂಬುತ್ತಿದ್ದರು ಇದಕ್ಕೆಲ್ಲ ಏನಾದರೂ ಸಾಕ್ಷಿ ಪುರಾವೆಗಳಿವೆ ಎಂಬುದು ಖಂಡಿತವಾಗಿಯೂ ಇದುವರೆಗೂ ತಿಳಿದು ಬಂದಿಲ್ಲ ನಾವು ಏನು ಹೇಳಲು ಬಯಸುತ್ತೇವೆ ಎಂದರೆ ಕೇವಲ ರಾಶಿ ನಕ್ಷತ್ರ ಕುಂಡಲಿಯನ್ನ ಮೆಚ್ಚಿಕೊಂಡು ಮದುವೆ ಮಾಡುವ ಬದಲು ಗಂಡು ಹೆಣ್ಣು ಯಾವ ರೀತಿಯ ಮನಸ್ಥಿತಿಯನ್ನ ಹೊಂದಿದ್ದಾರೆ ಮುಂದೆ ಅವರು ಜೀವನವನ್ನ ಸುಖಕರವಾಗಿ ನಡೆಸಿಕೊಂಡು ಹೋಗುತ್ತಾರೆ ಇಬ್ಬರ ಮನಸ್ಥಿತಿ ಒಂದೇ ಆಗಿದೆಯಾ ಇವನ್ನೆಲ್ಲ ಅರಿತುಕೊಂಡು ಮದುವೆಯನ್ನ ಫಿಕ್ಸ್ ಮಾಡಬೇಕು ಇಲ್ಲವಾದಲ್ಲಿ ತುಂಬಾ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
ನಮ್ಮ ಭಾರತ ದೇಶದಲ್ಲಿ ಮಗು ಜನಿಸಿದ ದಿನವೇ ಪುರೋಹಿತರಿಂದ ಮಗುವಿನ ಕುಂಡಲಿಯನ್ನ ಬಳಸುತ್ತಾರೆ ಏಕೆಂದರೆ ಮಗು ಯಾವ ನಕ್ಷತ್ರದಲ್ಲಿ ಹುಟ್ಟಿದೆ ಮುಂದಿನ ಜೀವನ ಹೇಗೆಲ್ಲ ನಡೆಸುತ್ತದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಪೋಷಕರಲ್ಲಿ ಇರುತ್ತದೆ ಹಾಗಾಗಿ ಭಾರತೀಯ ಜನರು ಜಾತಕವನ್ನು ತುಂಬಾ ನಂಬುತ್ತಾರೆ, ಮಗುವಿನ ಹುಟ್ಟಿದ ಸಮಯ ತೆಗೆದುಕೊಂಡು ನಕ್ಷತ್ರ ಯಾವುದು ಯಾವ ರಾಶಿಗೆ ಸೇರಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ ಇದಾದ ಮೇಲೆ ಒಂದೊಂದು ನಕ್ಷತ್ರಕ್ಕೆ ಒಂದೊಂದು ಪ್ರಾಣಿಯ ಹೆಸರನ್ನ ನೀಡಲಾಗಿದೆ ಈ ರಾಶಿ ನಕ್ಷತ್ರಗಳು ಮಗು ಬೆಳೆದು ದೊಡ್ಡವನಾದ ಮೇಲೆ ಮದುವೆ ಆಗುವ ಅಂತಹ ಸಮಯದಲ್ಲಿ ಇದನ್ನ ಬಳಸಿಕೊಂಡೆ ಮದುವೆಯನ್ನು ಫಿಕ್ಸ್ ಮಾಡಲಾಗುತ್ತದೆ ಉದಾಹರಣೆಗೆ ಕೆಲವು ನಕ್ಷತ್ರಗಳ ಹೊಂದಿರುವ ಗಂಡು ಹೆಣ್ಣು ಮದುವೆಯಾಗಬಾರದು ಎಂದು ಹೇಳುತ್ತಾರೆ ಉದಾಹರಣೆಗೆ ಈ ಕೆಳಗೆ ನಾವು ನೀಡಿರುವ ಕೆಲವು ರಾಶಿ ನಕ್ಷತ್ರ ಹೊಂದಿರುವವರು ಮದುವೆ ಆಗಬಾರದು ಅಕಸ್ಮಾತಾಗಿ ಏನಾದರೂ ಮದುವೆ ಆದರೆ ಜೀವನದಲ್ಲಿ ತುಂಬಾ ಪ್ರಾಬ್ಲಮ್ ಗಳನ್ನ ಫೇಸ್ ಮಾಡಬೇಕಾಗುತ್ತದೆ.
Read: Astrologers in Karnataka
ಹಸು - ಹುಲಿ
ಕೋತಿ - ಮೇಕೆ
ನಾಯಿ - ಬೆಕ್ಕು
ಬೆಕ್ಕು - ಇಲಿ
ಕುದುರೆ - ಎಮ್ಮೆ
ಹಾವು- ಮುಂಗುಸಿ
ಆನೆ - ಸಿಂಹ
ವಧು ವರರ ಜಾತಕವನ್ನು ನಿರ್ಧರಿಸುವಾಗ ಬಹುಮುಖ್ಯವಾಗಿ
ವರ್ಣ ಕೂಟ
ವರ್ಣ ಹೇಗಿದೆ ಇದಕ್ಕೆ ಮುಖ್ಯವಾಗಿ ಒಂದು ಅಂಕವನ್ನು ನೀಡುತ್ತಾರೆ ಇದು ಏನನ್ನ ಸೂಚಿಸುತ್ತದೆ ಎಂದರೆ ಗುಂಡು ಹಾಗೂ ಹೆಣ್ಣಿನ ಪ್ರೀತಿ ಬಾಂಧವ್ಯವನ್ನ ಸೂಚಿಸುತ್ತದೆ ಹೀಗಾಗಿಯೇ ಇದಕ್ಕೆ ಕೇವಲ ಒಂದು ಅಂಕವನ್ನ ನೀಡಲಾಗಿದೆ.
ಎರಡನೆಯದು ವೈಶ್ಯ ಕೂಟ: ಇದಕ್ಕೆ ಒಟ್ಟು ಎರಡು ಅಂಕವನ್ನ ನೀಡಲಾಗಿದೆ ಇದು ಗಂಡು ಹೆಣ್ಣಿನ ಅನ್ಯೂನ್ಯ ಬಾಂಧವ್ಯವನ್ನು ಸೂಚಿಸುತ್ತದೆ ಯಾರು ಹೆಚ್ಚಾಗಿ ಜೀವನವನ್ನು ಕಂಟ್ರೋಲ್ ಮಾಡುತ್ತಾರೆ ಇವರಿಬ್ಬರ ನಡುವಿನ ಗೆಳೆತನ ಹೇಗಿರುತ್ತೆ ಎಂಬುದನ್ನ ಈ ವಿಷಯ ಕೂಟವು ನಿರ್ಧರಿಸುತ್ತದೆ.
ಮೂರನೆಯದು ತಾರಾಬಲ: ಇದಕ್ಕೆ ಒಟ್ಟು ಮೂರು ಅಂಕವನ್ನ ನೀಡಿರುತ್ತಾರೆ. ಇದು ಏನನ್ನ ಸೂಚಿಸುತ್ತದೆ ಎಂದರೆ ಗಂಡು ಹಾಗೂ ಹೆಣ್ಣಿನ ಅದೃಷ್ಟವನ್ನು ನಿರ್ಧರಿಸುತ್ತದೆ.
ಯೂನಿ ಕೂಟ: ಇದಕ್ಕೆ ಒಟ್ಟು ನಾಲ್ಕು ಅಂಕವನ್ನು ನೀಡಿರುತ್ತಾರೆ ಇದು ಗಂಡು ಹೆಣ್ಣು ಮದುವೆಯಾದ ನಂತರ ಮಕ್ಕಳ ಭಾಗ್ಯವನ್ನು ಹೇಗೆಲ್ಲ ಪಡೆದುಕೊಳ್ಳುತ್ತಾರೆ ತಮ್ಮ ದೈಹಿಕ ಸಂಬಂಧ ಹೇಗಿರುತ್ತದೆ ಎಂಬುದನ್ನು ಈ ಯೋನಿ ಕೂಟದಿಂದ ನಿರ್ಧರಿಸುತ್ತಾರೆ.
ಮೈತ್ರಿ ಕೂಟ: ಈ ಕುಂಡಲಿಗೆ ಒಟ್ಟು ಐದು ಅಂಕಗಳನ್ನು ನೀಡುತ್ತಾರೆ ಇದು ಮಾನಸಿಕವಾಗಿ ಎಷ್ಟು ಗಂಡು ಹೆಣ್ಣು ಒಬ್ಬರನ್ನೊಬ್ಬರು ಬಯಸುತ್ತಾರೆ ಎಂಬುದನ್ನ ತಿಳಿಸುತ್ತದೆ ಹಾಗಾಗಿ ಗಂಡು ಹೆಣ್ಣು ಇಬ್ಬರನ್ನು ಸಹ ಮಾನಸಿಕವಾಗಿ ಒಪ್ಪಿಗೆ ಇರಬೇಕು ಎಂಬುದನ್ನ ಈ ಮೈತ್ರಿಕೂಟವು ತಿಳಿಸುತ್ತದೆ.
ಗಣ ಕೂಟ: ಇದು ಅತಿ ಮುಖ್ಯವಾದದ್ದು ಇತ್ತೀಚಿನ ದಿನದಲ್ಲಿ ನಾವು ಬಹು ಮುಖ್ಯವಾಗಿ ಮಾನವ ಗಣ ರಾಕ್ಷಸಗಣ ದೇವಗಣ ಎಂಬ ಮೂರು ಗಣವನ್ನ ಬಹುಮುಖ್ಯವಾಗಿ ಪರಿಗಣಿಸುತ್ತೇವೆ ಹಾಗಾಗಿ ರಾಕ್ಷಸಗಣ ಇದ್ದವರು ಮನುಷ್ಯಗಣ ಇದ್ದ ವರ ಅಥವಾ ವಧುವನ್ನು ವಧಿಸಿದರೆ ಜೀವನದಲ್ಲಿ ತುಂಬಾ ಕಷ್ಟವನ್ನು ಎದುರಿಸಬೇಕಾಗುತ್ತದೆ ಹಾಗೂ ಮಾನವನ ಇದ್ದರೆ ತುಂಬಾ ಒಳ್ಳೆಯ ಜೀವನವನ್ನು ಸಾಗಿಸುತ್ತಾರೆ ಅಥವಾ ಮಾನವ ಅಥವಾ ದೇವಗಣ ಇದ್ದರೂ ಸಹ ತುಂಬಾ ಸುಖಕರವಾದ ಜೀವನ ನಡೆಯುತ್ತದೆ ಹಾಗೂ ಅತಿ ಕೊನೆಯದಾಗಿ ದೇವ ಹಾಗೂ ರಾಜ್ಯಸಭೆ ಇದ್ದವರು ಸಹ ಮದುವೆ ಆಗಬಹುದು ಆದರೆ ಜೀವನದಲ್ಲಿ ತುಂಬಾ ಪ್ರಾಬ್ಲಮ್ ಗಳನ್ನ ಎದುರಿಸಬೇಕಾಗುತ್ತದೆ ಇದಕ್ಕೆ ಒಟ್ಟು ಆರು ಅಂಕಗಳನ್ನು ನೀಡಲಾಗಿದೆ ಹಾಗಾಗಿ ಇದು ಏನು ಸೂಚಿಸುತ್ತದೆ ಎಂದರೆ ವಧು ವರರ ನಡುವಿನ ಆರೋಗ್ಯ ಹಣಕಾಸು ಪ್ರೀತಿ ಮುಂತಾದವುಗಳನ್ನು ಇದು ಸೂಚಿಸುತ್ತದೆ.
Read: Daily Horoscope
ಬುಕುತ ಕೂಟ: ಇದಕ್ಕೆ ಒಟ್ಟು ಏಳು ಅಂಕವನ್ನು ನೀಡಲಾಗಿದೆ ಇದು ಏನನ್ನ ಸೂಚಿಸುತ್ತದೆ ಎಂದರೆ ಆರೋಗ್ಯ ಮಕ್ಕಳು ಅದೃಷ್ಟ ಹಾಗೂ ಕುಟುಂಬದ ಜೊತೆ ಹೇಗೆ ಬಾಂಧವ್ಯ ಬೆಳೆಯುತ್ತದೆ ಎಂಬುದನ್ನ ಸೂಚಿಸುತ್ತದೆ ಹಾಗಾಗಿ ಇದು ಅತಿ ಮುಖ್ಯವಾಗಿ ಬೇಕಾಗಿರುವಂತಹ ಅಂಕವಾಗಿದೆ ಹಾಗಾಗಿ ಯಾರೆಲ್ಲಾ ಉತ್ತಮವಾದ ಜೀವನವನ್ನು ನಡೆಸಬೇಕು ಮದುವೆಯಾದ ನಂತರ ಅಂದುಕೊಂಡವರು ಖಂಡಿತವಾಗಿ ಕೂಟವನ್ನು ಅತಿ ಸೂಕ್ಷ್ಮವಾಗಿ ಗಮನಿಸುತ್ತಾರೆ.
ನಾಡಿ ಕೂಟ: ಅತಿ ಶ್ರೇಷ್ಠವಾದ ಕೂಟ ಇದೇ ಆಗಿದೆ ಇದಕ್ಕೆ ಒಟ್ಟು ಎಂಟು ಅಂಕಗಳನ್ನ ನೀಡಿರುತ್ತಾರೆ ಇದು ಗಂಡು ಹಾಗೂ ಹೆಣ್ಣಿನ ಬಾಂಧವ್ಯದ ಬಗ್ಗೆ ತಿಳಿಸಿಕೊಡುತ್ತದೆ ಯಾರಿಗೆ ಈ ಕೂಟ ಸರಿಯಾಗಿ ಹೊಂದಿಕೆ ಆಗೋದಿಲ್ಲ ಅವರು ಮದುವೆಯನ್ನು ಮಾಡಿಕೊಳ್ಳಲು ಒಪ್ಪಿಗೆಯನ್ನು ನೀಡುವುದಿಲ್ಲ ಏಕೆಂದರೆ ಈ ಗಣಕೂಟವು ಸರಿಯಾಗಿ ಹೊಂದಾಣಿಕೆ ಆಗದೆ ಹೋದರೆ ತುಂಬಾ ತೊಂದರೆಗೆ ಒಳಗಾಗಬೇಕಾಗುತ್ತದೆ ಈ ಕಾರಣದಿಂದಾಗಿಯೇ ಈ ಕೂಟ ಗಂಡು ಹೆಣ್ಣಿಗೆ ಹೊಂದಾಣಿಕೆ ಆಗುವುದು ಅತಿ ಅವಶ್ಯ.
ದಿನ ರಾಶಿ ಭವಿಷ್ಯ
ಮೇಷ ರಾಶಿ ಈ ರಾಶಿಯವರಿಗೆ ಈ ವಾರ ತುಂಬಾ ಕಷ್ಟಕರ ದಿನವನ್ನ ನೋಡುವ ದಿನಗಳು ಸಿಗುತ್ತವೆ ಏಕೆಂದರೆ ಸೂರ್ಯನು ನಾಲ್ಕನೇ ಮನೆಯಲ್ಲಿದ್ದಾನೆ ರಾಹು ಕೇತುಗಳು ಒಂದು ಹಾಗೂ ಒಂಬತ್ತನೇ ಮನೆಯಲ್ಲಿದ್ದಾರೆ ಹಾಗಾಗಿ ನಿಮ್ಮ ನೆರವಿಗೆ ಯಾವ ಗ್ರಹಗಳು ಬರುವುದಿಲ್ಲ ಈ ಕಾರಣದಿಂದಾಗಿಯೇ ಹಲವು ದಿನಗಳ ಹಿಂದೆ ನೀವು ಮಾಡಿದ ತಪ್ಪಿನಿಂದಾಗಿ ಈಗ ಪ್ರಾಯಶ್ಚಿತ ಪಡುವ ದಿನಗಳು ನಿಮಗೆ ಎದುರಾಗಲಿವೆ ಹಾಗಾಗಿ ಯಾವುದೇ ಹೊಸ ಕೆಲಸಗಳನ್ನು ಪ್ರಾರಂಭಿಸಲು ಹೋಗಬೇಡಿ ಈಗಾಗಲೇ ನೀವು ಮಾಡುತ್ತಿರುವ ಕೆಲಸವನ್ನು ಶ್ರದ್ಧೆ ಹಾಗೂ ನಿಷ್ಠೆಯಿಂದ ಮಾಡಿಕೊಂಡು ಹೋದರೆ ಒಳ್ಳೆಯದು ಅಕಸ್ಮಾತಾಗಿ ನೀವೇನಾದರೂ ಹೊಸ ಕೆಲಸಗಳನ್ನು ಮಾಡಲು ಪ್ರಾರಂಭಿಸಿದ್ದರೆ ಖಂಡಿತ ಸಕ್ಸಸ್ ಅನ್ನ ನೀವು ಪಡೆಯೋದಿಲ್ಲ ಈ ಕಾರಣಕ್ಕಾಗಿ ಆದಷ್ಟು ಈ ವಾರ ನಿಂತಿದ್ದ ಕೆಲಸವನ್ನು ಮುಂದುವರಿಸಿ ಪ್ರತಿದಿನ ಬೆಳಗ್ಗೆ ಎದ್ದ ನಂತರ ದೇವರಿಗೆ ನಮಸ್ಕರಿಸಿ ಸಮಯ ಸಿಕ್ಕಾಗ ಧ್ಯಾನ ಮಾಡಿ ಪೋಷಕರ ಅಭಿಪ್ರಾಯವನ್ನು ಪಡೆದುಕೊಂಡು ನಿಮ್ಮ ಕೆಲಸವನ್ನು ಮುಂದುವರಿಸಿ ಎಲ್ಲವೂ ಒಳ್ಳೆಯದಾಗುತ್ತೆ ನಿಮ್ಮ ಅದೃಷ್ಟ ಸಂಖ್ಯೆ ಈ ವಾರ ಎರಡು ಹಾಗೂ ಅದೃಷ್ಟ ಬಣ್ಣ ನೀಲಿ.
ವೃಷಭ ರಾಶಿ ಈ ರಾಶಿಯವರಿಗೆ ಅದೃಷ್ಟ ಹುಡುಕಿಕೊಂಡು ಬರುತ್ತದೆ, ನೀವು ಬಹಳ ದಿನಗಳ ಹಿಂದೆ ಪ್ರಾರಂಭಿಸಿದ್ದ ಕೆಲವು ಯೋಜನೆಗಳು ಸಕ್ಸಸ್ ಆಗುತ್ತೆ ನಿಮ್ಮ ಗೆಳೆಯರಿಗೆ ನೀಡಿದ ಹಣ ನಿಮಗೆ ಹಿಂತಿರುಗಿ ಬರಲಿದೆ ಹಾಗಾಗಿ ನೀವೇನಾದರೂ ಹೊಸ ಬ್ಯುಸಿನೆಸ್ ಮಾಡಬೇಕು ಎಂಬ ಉದ್ದೇಶದಿಂದ ಹುಡುಕಾಟ ನಡೆಸುತ್ತಿದ್ದರೆ ಖಂಡಿತ ಈ ಸಮಯವನ್ನು ನೀವು ಬಳಸಿಕೊಳ್ಳಬಹುದು ಗೆಳೆಯರು ಸಹ ನಿಮ್ಮ ನೆರವಿಗೆ ಬರಲಿದ್ದಾರೆ ನಿಮ್ಮ ಹೊಸ ಯೋಜನೆಗಳು ಸಂಪೂರ್ಣವಾಗಿ ಕಾರ್ಯಕರ್ತ ಆಗಲಿದೆ ಏನಾದರೂ ಕೆಲಸವನ್ನು ಪ್ರಾರಂಭಿಸಬೇಕಾದರೆ ಗುರುಹಿರಿಯರ ಸಲಹೆ ಪಡೆದು ಮುಂದುವರಿಸಿ ಎಲ್ಲಾ ಒಳ್ಳೆಯದಾಗುತ್ತೆ ಈ ವಾರದ ನಿಮ್ಮ ಅದೃಷ್ಟ ಸಂಖ್ಯೆ ಏಳು ಹಾಗೂ ಅದೃಷ್ಟ ಬಣ್ಣ ಬಿಳಿ.
ಮಿಥುನ ರಾಶಿ, ನಿಮ್ಮ ಸಂಕಷ್ಟದ ದಿನಗಳು ಈ ವಾರ ಕಳೆದ ನಂತರ ದೂರ ಆಗಲಿವೆ ಶಿಕ್ಷಣದಲ್ಲಿ ಉತ್ತಮ ಬೆಳವಣಿಗೆಯನ್ನು ನೀವು ಕಾಣಲಿದ್ದೀರಿ ಕಷ್ಟಪಟ್ಟು ನೀವು ವಿದ್ಯಾಭ್ಯಾಸ ಮಾಡಿರುವ ಕಾರಣಕ್ಕಾಗಿ ಒಳ್ಳೆಯ ಫಲಿತಾಂಶವನ್ನು ಪಡೆಯಲಿದ್ದೀರಿ ಯಾರೆಲ್ಲಾ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಲು ಹುಡುಕಾಟ ನಡೆಸುತ್ತಿದ್ದಾರೆ ಅವರಿಗೆ ಖಂಡಿತ ಒಳ್ಳೆಯ ಸುದ್ದಿ ಸಿಗಲಿದೆ, ಯಾರೆಲ್ಲಾ ವಿದೇಶಿ ಪ್ರಯಾಣ ನಡೆಸಬೇಕು ಅಂದುಕೊಂಡಿದ್ದಾರೆ ಅವರಿಗೆ ಖಂಡಿತ ಒಳ್ಳೆಯ ಅವಕಾಶಗಳು ದೊರಕಲಿವೆ. ಈಗ ತಾನೇ ವಿದ್ಯಾಭ್ಯಾಸ ಮುಗಿಸಿರುವ ಮಕ್ಕಳಿಗೆ ಒಳ್ಳೆಯ ಕಡೆ ಕೆಲಸದ ಆಪರ್ಚುನಿಟಿ ಸಹ ಸಿಗಲಿದೆ, ಮಿಥುನ ರಾಶಿಯವರು ಈ ತಿಂಗಳು ಯಾರೆಲ್ಲಾ ಬಿಸಿನೆಸ್ ಮಾಡುತ್ತಿದ್ದಾರೆ ಅವರಿಗೆ ಹೆಚ್ಚಿನ ಆದಾಯ ದೊರಕಲಿದೆ ಹೊಸ ಕಾರ್ಯವನ್ನ ನೀವು ಮಾಡಲು ಮುಂದಾಗುತ್ತೀರಿ ನಿಮ್ಮ ಅದೃಷ್ಟ ಸಂಖ್ಯೆ 3 ಹಾಗೂ ಅದೃಷ್ಟ ಬಣ್ಣ ಈ ವಾರ ಕೆಂಪು.