ಜೂನಿಯರ್ ಚಿರು ನಾಮಕರಣ, ರಾಯನ್ ಎಂಬ ಹೆಸರಿಟ್ಟ ಮೇಘನಾ

ಮೇಘನಾ ಗಂಡ ಚಿರು ಸರ್ಜಾ ತೀರಿಹೋಗಿ ಒಂದು ವರ್ಷ ಕಳೆದಿದೆ, ಇನ್ನೂ ಚಿರು ತೀರಿಹೋದ ಮೇಲೆ ಹುಟ್ಟಿದ ಅವರ ಮಗನಿಗೆ ನಾಮಕರಣ ಶಾಸ್ತ್ರ ನೆರವೇರಿರಲಿಲ್ಲ ಕೊನೆಗೂ 11 ತಿಂಗಳ ನಂತರ ನಾಮಕರಣವಾಗಿದೆ, ಹಲವು ಜನರು ಜೂನಿಯರ್ ಚಿರು, ಪುಟ್ಟ, ಕಂದ ಎಂಬ ಹಲವು ಹೆಸರುಗಳಿಂದ ಮಗುವನ್ನು ಕರೆಯುತ್ತಿದ್ದರು ಆದರೆ ಇದೀಗ ಮಗುವಿಗೆ ರಾಯನ್ ಎಂಬ ಹೆಸರನ್ನು ಮೇಘನಾ ರಾಜ್ ಇಟ್ಟಿದ್ದಾರೆ. ಇಂದು ಮಗುವಿನ ನಾಮಕರಣ ಶಾಸ್ತ್ರ ಹಿಂದೂ ಹಾಗೂ ಕ್ರೈಸ್ತ ಧರ್ಮದ ಪ್ರಕಾರ ನೆರವೇರಿತು ಕುಟುಂಬವರ್ಗದವರು ಸ್ನೇಹಿತರು ಮಾತ್ರ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಕಾರಣ corona.

ಇಂದು ಮಗುವಿನ ನಾಮಕರಣದಲ್ಲಿ ಕುಟುಂಬಸ್ಥರು ಹಾಗೂ ಚಿಕ್ಕಪ್ಪನಾದ ಅದ್ದೂರಿ ಸಿನಿಮಾದ ನಾಯಕ ಧ್ರುವ ಸರ್ಜಾ ದಂಪತಿಗಳು ಪಾಲ್ಗೊಂಡಿದ್ದರು, ಇನ್ನು ತಾತ ಅರ್ಜುನ್ ಸರ್ಜಾ ಭಾರತದಲ್ಲಿ ಇಲ್ಲದ ಕಾರಣ ನಾಮಕರಣ ಶಾಸ್ತ್ರದಲ್ಲಿ ಪಾಲ್ಗೊಳ್ಳಲಿಲ್ಲ. ಮಗುವಿನ ನಾಮಕರಣವನ್ನು ಬಹಳ ಅದ್ದೂರಿಯಾಗಿ ಬೆಂಗಳೂರಿನ ಪ್ರಖ್ಯಾತ ಹೋಟೆಲ್ನಲ್ಲಿ ನಡೆಸಲಾಯಿತು, ಬಹುಮುಖ್ಯವಾಗಿ ಮೇಘನಾ ತಂದೆ ಸುಂದರರಾಜ್ ಮಗುವಿನ ನಾಮಕರಣ ಶಾಸ್ತ್ರಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಮಾಡಿದ್ದರು.
ಈಗ ಕರ್ನಾಟಕದ ರಾಯಲ್ ಸೆಲೆಬ್ರಿಟಿ ಮಗು ಏಕೆಂದರೆ ಈ ಮಗುವಿನ ತಂದೆ ಕಳೆದ ವರ್ಷ ತೀರಿಹೋಗಿದ್ದಾರೆ ಮಗುವಿನ ಜನನಕ್ಕೆ ಮೊದಲೇ ತಂದೆ ತೀರಿಹೋಗಿದ್ದು ಕರ್ನಾಟಕದ ಜನರ ಸಿಂಪತಿ ಈ ಮಗುಗಳಿಸಿದೆ ನೋಡಲು ಬಹಳ ಮುದ್ದಾದ ಹಾಗೂ ಚಿರಂಜೀವಿ ಸರ್ಜನಂತೆ ಈ ಮಗು ಕಾಣಿಸುತ್ತದೆ ಇದು ಎಲ್ಲರ ಗಮನಸೆಳೆದಿದೆ.
ಮೇಘನಾ ರಾಜ್ ತಂದೆತಾಯಿಯರು ಇಬ್ಬರು ಕನ್ನಡದ ನಟ ನಟಿಯರು ಸ್ಯಾಂಡಲ್ ವುಡ್ ಗೆ ಹಲವಾರು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ ಮೇಘನಾಗೆ ಒಬ್ಬ ಅಣ್ಣ ಇದ್ದಾನೆ. ಬಾಲನಟಿಯಾಗಿ ತುಂಬಾ ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಂಡ ಈಕೆ ತದನಂತರ ವಿದ್ಯಾಭ್ಯಾಸಕ್ಕೆ ಅತಿ ಹೆಚ್ಚು ಒತ್ತನ್ನು ಕೊಟ್ಟರು ಸೈಕಾಲಜಿಯಲ್ಲಿ ಡಿಗ್ರಿಯನ್ನು ಪಡೆದ ನಂತರ ಸಿನಿಮಾ ರಂಗದಲ್ಲಿ ಪಾದಾರ್ಪಣೆಯನ್ನು ಮಾಡಿದರು ಮೊದಲ ಬಾರಿಗೆ ಮಲಯಾಳಂ ಚಿತ್ರದಲ್ಲಿ ನಟಿಸಿದ್ದ ಈಕೆ ಹಲವು ಸೂಪರ್ ಡೂಪರ್ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಕನ್ನಡದಲ್ಲಿ ರಾಜಾಹುಲಿ ಮೂಲಕ ಎಂಟ್ರಿ ಕೊಟ್ಟರು ನಂತರ ಆಟಗಾರ ಮುಂತಾದ ಕನ್ನಡ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಇಷ್ಟೆಲ್ಲಾ ಸಿನಿಮಾಗಳಲ್ಲಿ ನಟಿಸಿರುವ ಈಕೆಗೆ ದೊಡ್ಡ ಫ್ಯಾನ್ ಫಾಲವರ್ಸ್ ಕರ್ನಾಟಕದಲ್ಲಿದೆ.
ಏಳು ವರ್ಷಗಳ ಕಾಲ ಮೇಘನಾರಾಜ್ ಹಾಗೂ ಚಿರಂಜೀವಿ ಸರ್ಜಾ ಪ್ರೀತಿಮಾಡಿ ತದನಂತರ ಕುಟುಂಬವರ್ಗದವರನ್ನು ಒಪ್ಪಿಸಿ ಮದುವೆಯಾದರು, ಮದುವೆಯಾದ ಕೇವಲ ಎರಡೇ ವರ್ಷದಲ್ಲಿ ಚಿರಂಜೀವಿ ಹೃದಯಾಘಾತದಿಂದ ನಿಧನರಾದರು ಅತಿ ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಈಕೆ ತುಂಬಾ ದುಃಖದಲ್ಲಿದ್ದರೂ, ತುಂಬಾ ಸಂತೋಷದ ಕುಟುಂಬ ಇವರದಾಗಿತ್ತು ವಿಧಿ ಬರಹ ಅಥವಾ ಯಾವ ಜನ್ಮದಲ್ಲಿ ಮಾಡಿದ ಕರ್ಮದ ಫಲ ಈ ಜನ್ಮದಲ್ಲಿ ಈ ರೀತಿ ಮೇಘನಾಗೆ ಪರಿಸ್ಥಿತಿ ಬಂದಿದೆ ಇವರಿಬ್ಬರ ಪ್ರೀತಿಯ ಸಂಕೇತವಾಗಿ ಉಳಿದಿರುವ ಜೂನಿಯರ್ ಚಿರು ಈಗ ಇಡೀ ಕುಟುಂಬವನ್ನು ಸಂತೋಷದ ಕಡಲಲ್ಲಿ ಇರುವಂತೆ ಮಾಡಿದ್ದಾನೆ ಇನ್ನು ಮೇಘನಾ ತಮ್ಮ ಜೀವವನ್ನೇ ರಾಯನ್ ಮೇಲೆ ಇಟ್ಟುಕೊಂಡಿದ್ದಾರೆ, ಕೊನೆಗೂ ಮಗುವಿನ ನಾಮಕರಣ ಶಾಸ್ತ್ರ ಮುಗಿದಿದೆ, ಕನ್ನಡಿಗರೆಲ್ಲರೂ ಮಗುವಿಗೆ ಒಳ್ಳೆಯದಾಗಲಿ ಎಂಬುದನ್ನು ದೇವರಲ್ಲಿ ಪ್ರಾರ್ಥಿಸಿ.
ಮೇಘನಾ ರಾಜ್ ಹಾಗೂ ಚಿರು ಮಗುವಿಗೆ ಒಳ್ಳೆಯದಾಗಲಿ ಎಂಬ ಮನಸ್ಸು ಕರ್ನಾಟಕ ಸಮಸ್ತ ಜನರದ್ದಾಗಿದೆ, ನಾವು ಆಗಲೇ ತಿಳಿಸಿದಂತೆ ಚಿರಂಜೀವಿ ಸರ್ಜಾ ಮೇಘನಾಪ್ರೀತಿಸಿ ಮದುವೆ ಆದವರು ಇವರ ಸಂಬಂಧ ತುಂಬಾ ಅನ್ಯೋನ್ಯವಾಗಿತ್ತು ಆದರೆ ಕಳೆದ ವರ್ಷ ಚಿರಂಜೀವಿ ಹೃದಯಾಘಾತದಿಂದ ಮರಣ ಹೊಂದಿದ ನಂತರ ಒಬ್ಬಂಟಿಯಾಗಿ ಉಳಿದ ಮೇಘನಾಗೆ ಸ್ನೇಹಿತ ಸ್ನೇಹಿತೆಯರು ತುಂಬಾ ಸಾತ್ ಕೊಟ್ಟರು ನೋವಿನ ಕ್ಷಣದಲ್ಲಿ ಜೊತೆಗಿದ್ದು ನೋವನ್ನು ಮರೆಸಲು ಪ್ರಯತ್ನಿಸಿದರು, ಚಿರು ಸತ್ತಾಗ ಮೇಘನಾಗೆ ಆರು ತಿಂಗಳಾಗಿತ್ತು ತುಂಬು ಗರ್ಭಿಣಿಗೆ ಗಂಡನ ಮನೆಯವರು ಹಾಗೂ ತವರುಮನೆಯವರು ಒಳ್ಳೆಯ ಸಾಥ್ ಕೊಟ್ಟರು ಅತ್ತಿಗೆಗೆ ಸದಾ ಜೊತೆಯಾಗಿ ನಿಂತ ಧ್ರುವ ಸರ್ಜಾ ಪ್ರತಿಕ್ಷಣದಲ್ಲೂ ಜೊತೆಯಾದರು, ಮಗುವಿನ ಜನನ ನಂತರ ಮೇಘನಾ ಮಗುವಿನ ಆರೈಕೆಯಲ್ಲಿ ತುಂಬಾ ಬಿಜಿಯಾಗಿದ್ದಾರೆ ಮುಂದೆ ಅವಕಾಶಗಳು ಸಿಕ್ಕರೆ ಖಂಡಿತವಾಗಿಯೂ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂಬ ಭರವಸೆಯನ್ನು ಸಹ ಇಟ್ಟುಕೊಂಡಿದ್ದಾರೆ, ಮಗುವಿಗೆ 11 ತಿಂಗಳು ಕಳೆದರೂ ನಾಮಕರಣ ಶಾಸ್ತ್ರ ನೆರವೇರಲಿಲ್ಲ ಆದರೆ 11 ತಿಂಗಳ ನಂತರ ಈಗ ಸಮಯ ಕೂಡಿ ಬಂದು ಮಗುವಿಗೆ ರಾಯನ್ ಎಂಬ ಹೆಸರಿಟ್ಟಿದ್ದಾರೆ, ಇವತ್ತು ನಡೆದ ನಾಮಕರಣ ಶಾಸ್ತ್ರದಲ್ಲಿ ಕುಟುಂಬಸ್ಥರು, ಗೆಳೆಯ-ಗೆಳತಿಯರು ಪಾಲ್ಗೊಂಡು ಮಗುವಿಗೆ ಆಶೀರ್ವಾದ ನೀಡಿದರು.